ಬಿಡದಿ-ಜಿಗಣಿಗಳಲ್ಲಿ ಆಟೊಮೊಬೈಲ್‌ ದೈತ್ಯ ‘ಟೊಯಾಟ’ ರಫ್ತು ಘಟಕ

ಬೆಂಗಳೂರು : ಆಟೊಮೊಬೈಲ್‌ ಕ್ಷೇತ್ರದ ದೈತ್ಯ ಟೊಯಾಟ ಕಂಪನಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿಡದಿ ಹಾಗೂ ಬೆಂಗಳೂರು ನಗರ ಜಿಲ್ಲೆಯ ಜಿಗಣಿಗಳಲ್ಲಿ ಪ್ರತಿಶತ 100 ರಫ್ತು ಆಧಾರಿತ ಘಟಕಗಳನ್ನು ಸ್ಥಾಪಿಸಲು ಉದ್ದೇಶಿಸಿದ್ದು , ಕರ್ನಾಟಕ ಸರ್ಕಾರ ಈ ಪ್ರಸ್ತಾವನೆಗಳಿಗೆ ಅನುಮತಿ ನೀಡಿದೆ.

480 ಕೋಟಿ ರುಪಾಯಿ ಬಂಡವಾಳದ ಈ ಎರಡು ಘಟಕಗಳ ಸ್ಥಾಪನೆಗೆ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಒಪ್ಪಿಗೆ ನೀಡಿದೆ. ಬಿಡದಿಯ ಘಟಕ 350 ಕೋಟಿ ರು. ಬಂಡವಾಳದಲ್ಲಿ ರೂಪುಗೊಂಡರೆ, ಜಿಗಣಿಯಲ್ಲಿ ನ ಘಟಕಕ್ಕೆ 130 ಕೋಟಿ ರುಪಾಯಿ ಬಂಡವಾಳ ಹೂಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಆರ್‌.ವಿ.ದೇಶಪಾಂಡೆ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಮುಂದಿನ ವರ್ಷದ ಡಿಸೆಂಬರ್‌ನಿಂದ ಪ್ರಾಯೋಗಿಕ ಹಾಗೂ 2004 ನೇ ಇಸವಿಯಿಂದ ವಾಣಿಜ್ಯ ಉತ್ಪನ್ನಗಳನ್ನು ತಯಾರಿಸಲು ಟೊಯಾಟ ಉದ್ದೇಶಿಸಿದೆ. 1.68 ಲಕ್ಷ ಆಟೊಮೋಟಿವ್‌ ಸಿಸ್ಟಂಗಳನ್ನು ಅರ್ಜೆಂಟೈನಾ, ದಕ್ಷಿಣ ಆಫ್ರಿಕಾ, ಥೈಲ್ಯಾಂಡ್‌, ಮಲೇಷಿಯಾ, ತೈವಾನ್‌, ವೆನಿಜುವೆಲಾ, ಇಂಡೋನೇಷಿಯಾ ಹಾಗೂ ಇತರ ರಾಷ್ಟ್ರಗಳಿಗೆ ಟೊಯಾಟೊ ರಫ್ತು ಮಾಡಲಿದೆ.

ತನ್ನ ಎರಡನೇ ಹಂತದ ವಿಸ್ತರಣೆಯಲ್ಲಿ 2004 ರಲ್ಲಿ 500 ರಿಂದ 700 ಮಿಲಿಯನ್‌ ಡಾಲರ್‌ ಹಾಗೂ 3 ನೇ ಹಂತದ ವಿಸ್ತರಣೆ- 2007 ನೇ ಇಸವಿಯಲ್ಲಿ 400 ಮಿಲಿಯನ್‌ ಡಾಲರ್‌ ಬಂಡವಾಳವನ್ನು ಕರ್ನಾಟಕದಲ್ಲಿ ಹೂಡಲು ಟೊಯಾಟ ಕಂಪನಿ ಉದ್ದೇಶಿಸಿದೆ ಎಂದು ದೇಶಪಾಂಡೆ ತಿಳಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+