ಕಾರ್ಕಳ ಗೊಮ್ಮಟನಿಗೆ ಮಹಾ ಮಜ್ಜನ:ಶ್ರಾವಕರಿಗೆ ಇನ್ನೊಂದು ಅವಕಾಶ
ಮೂಡಬಿದರೆ : ಕಾರ್ಕಳದ ಬಾಹುಬಲಿ ಮೂರ್ತಿಗೆ ಮಾರ್ಚ್ 10 ರ ಭಾನುವಾರ ಮತ್ತೆ ಮಹಾ ಮಸ್ತಾಭಿಷೇಕ ನಡೆಯಲಿದೆ. ಸಂಜೆ 4 ಗಂಟೆಯಿಂದ ಮಹಾನ್ ವಿರಾಗಿಯ ಮಹಾ ಮಜ್ಜನ ಪ್ರಾರಂಭ.
ಎಳನೀರು, ಇಕ್ಷುರಸ, ಶ್ರೀಗಂಧ, ಅರಷಿನ, ಹಾಲು, ಕಲ್ಕಚೂರ್ಣ, ಅಷ್ಟಗಂಧ, ಪುಷ್ಪವೃಷ್ಟಿ , ಕನಕಾಭಿಷೇಕ, ಚತುಷ್ಕೋನ ಹಾಗೂ ಪೂರ್ಣಕುಂಭ ಕಲಶಗಳ ಅಭಿಷೇಕ ಬಾಹುಬಲಿಗೆ ನಡೆಯಲಿದೆ. ಈ ಕಲಶಗಳನ್ನು ಮಹಾ ಮಸ್ತಕಾಭಿಷೇಕದ ದಿನ ಬೆಟ್ಟದ ಮೇಲೆ ಹರಾಜು ಮಾಡಲಾಗುವುದು. ಹೆಚ್ಚಿನ ಶ್ರಾವಕರಿಗೆ ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸಲಾಗುವುದು ಎಂದು ಸಮಿತಿಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಸ್ತಕಾಭಿಷೇಕದಲ್ಲಿ ಭಾಗಿಯಾಗಲು ಬಯಸುವವರು ಹಾಗೂ ಕಲಶಗಳನ್ನು ಮುಂಚಿತವಾಗಿ ಪಡೆಯಲು ವಿವರಗಳನ್ನು ಅಪೇಕ್ಷಿಸುವವರು ದೂರವಾಣಿ ಸಂಖ್ಯೆ (08258) 23099 ಅಥವಾ (08258) 24844 ಸಂಪರ್ಕಿಸಬಹುದು.
(ಇನ್ಫೋ ವಾರ್ತೆ)
ವಾರ್ತಾಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications