ಕನ್ನಡ ಕಂದನಿಗೆ ಕನ್ನಡ ತುತ್ತೂರಿ: ಪ್ರಸಕ್ತ ವರ್ಷದಿಂದಲೇ ಕನ್ನಡ ನರ್ಸರಿ
ಬೆಂಗಳೂರು: ಕನ್ನಡ ನರ್ಸರಿ ಶಾಲೆ(ಪೂರ್ವ ಪ್ರಾಥಮಿಕ) ಗಳನ್ನು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಆರಂಭಿಸುವ ಮಹತ್ವದ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.
ಶಿಕ್ಷಣ ಸಚಿವ ಎಚ್.ವಿಶ್ವನಾಥ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಬುಧವಾರದ ಸಭೆ ಕನ್ನಡ ನರ್ಸರಿ ಶಾಲೆಗಳನ್ನು ತೆರೆಯುವ ತೀರ್ಮಾನ ಕೈಗೊಂಡಿತು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ವಿಶ್ವನಾಥ್ ಅವರು, ಕನ್ನಡ ನರ್ಸರಿಗೆ ಪಠ್ಯ ಹಾಗೂ ಪಠ್ಯೇತರ ಕಾರ್ಯಕ್ರಮಗಳನ್ನು ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ಕನ್ನಡ ನರ್ಸರಿ ಶಾಲೆಗಳನ್ನು ತೆರೆಯಲು ಖಾಸಗಿಯವರು ಆಸಕ್ತರಾಗಿದ್ದಾರೆ. ಅವರಿಗೆ ಅನುಮತಿ ನೀಡಲಾಗುವುದು. ಈ ಶಾಲೆಗಳ ಪ್ರಾರಂಭದಿಂದ ಕನ್ನಡ ಮಾಧ್ಯಮದ ಶಾಲೆಗಳಿಗೆ ಮಗುವನ್ನು ಒಂದನೇ ತರಗತಿಗೆ ಸೇರಿಸುವಾಗ ಉಂಟಾಗುತ್ತಿದ್ದ ಗೊಂದಲ ಪರಿಹಾರವಾಗಲಿದೆ ಎಂದು ವಿಶ್ವನಾಥ್ ಹೇಳಿದರು.
ಅನಧಿಕೃತ ಟಿಸಿಎಚ್ ಕಾಲೇಜುಗಳ 7500 ಮಂದಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಕೂಡಲು ಸರ್ಕಾರಿ ಅನುಮತಿ ನೀಡುವುದಿಲ್ಲ ಎಂದು ವಿಶ್ವನಾಥ್ ಸ್ಪಷ್ಟಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications