ಸದ್ಯದಲ್ಲೇ ಕೊಂಕಣ ರೈಲ್ವೇ ಟಿಕೇಟುಗಳ ಆನ್‌ಲೈನ್ ಬುಕಿಂಗ್ ವ್ಯವಸ್ಥೆ
ಕಾರವಾರ : ವಿದೇಶಿ ಪ್ರವಾಸಿಗರನ್ನು ದೃಷ್ಟಿಯಲ್ಲಿಟ್ಟುಕೊಂಡು ಕೊಂಕಣ ರೈಲು ನಿಗಮ ಇಂಟರ್‌ನೆಟ್ ರೈಲು ಟಿಕೆಟ್ ವಿತರಿಸುವ ವ್ಯವಸ್ಥೆಯನ್ನು ಆರಂಭಿಸಿದೆ.
ಈ ಹೊಸ ವ್ಯವಸ್ಥೆಗೆ ಸಂಬಂಧಿಸಿದಂತೆ ಕೊಂಕಣ ರೈಲು ನಿಗಮದ ಅಧ್ಯಕ್ಷ ಬಿ. ರಾಜಾರಾಮ ಹಾಗೂ ಐಸಿಐಸಿಐ ಬ್ಯಾಂಕ್‌ನ ಮುಖ್ಯನಿರ್ವಹಣಾ ಅಧಿಕಾರಿ ಅನುಪ್ ನಾಯರ್ ಅವರು ಒಪ್ಪಂದಕ್ಕೆ ಈಗಾಗಲೇ ಸಹಿ ಹಾಕಿದ್ದು, ಸದ್ಯದಲ್ಲೇ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಮಡಗಾಂವ್- ಮುಂಬಯಿ ಕೊಂಕಣ ಕನ್ಯಾ ರೈಲಿನ 3 ಹವಾ ನಿಯಂತ್ರಿತ ಬೋಗಿಗಳಲ್ಲಿ ಒಂದು ಸೀಟಿಗೆ 25 ಅಮೆರಿಕನ್ ಡಾಲರ್ ಶುಲ್ಕ ವಿಧಿಸಲಾಗುವುದು. ಮುಂಗಡ ಟಿಕೇಟು ಖರೀದಿಸಲು ಇಚ್ಛಿಸುವವರು ಏಳು ದಿವಸಗಳ ಮುಂಚೆ ಕಚೇರಿಗೆ ಈ-ಮೇಯ್ಲ್ ಮುಖಾಂತರ ತಿಳಿಸಬೇಕು. ಪಾಸ್‌ಪೋರ್ಟ್ ಪ್ರತಿ ಅಥವಾ ಈ-ಮೇಯ್ಲ್ ಹಾಗೂ ಫೋನ್ ನಂಬರ್ ಖಾತರಿಯನ್ನು ತಿಳಿಸಿ ಟಿಕೇಟು ಬುಕ್ ಮಾಡಬಹುದು.
(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications