ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ಗೆ ಜಾರ್ಜ್‌ ಫರ್ನಾಂಡಿಸ್‌ : ಹಿಂಸಾಚಾರಕ್ಕೆ 140 ಬಲಿ ?

By Staff
|
Google Oneindia Kannada News

ಅಹಮದಾಬಾದ್‌ : ಹಿಂಸಾಚಾರ ಭುಗಿಲೆದ್ದಿರುವ ಗುಜರಾತ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಖುದ್ದು ನಿಗಾ ವಹಿಸಲು ಕೇಂದ್ರ ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌ ಅಹಮದಾಬಾದ್‌ ತಲುಪಿದ್ದಾರೆ. ಅವರು ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ನಡುವೆ ಗುಜರಾತ್‌ನ ವಿವಿಧ ಭಾಗಗಳಲ್ಲಿ ಗುಂಪು ಘರ್ಷಣೆ ಮುಂದುವರಿದಿದ್ದು , ಅಹಮದಾಬಾದ್‌ನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ. ರಾಜ್‌ಕೋಟ್‌ನಲ್ಲಿ ಎರಡು ಧಾರ್ಮಿಕ ಸ್ಥಳಗಳಿಗೆ ಬೆಂಕಿ ಹಚ್ಚಲಾಗಿದೆ. ಯಾಗ್ನಿಕ್‌ ರಸ್ತೆಯಲ್ಲಿನ ವಾಣಿಜ್ಯ ಸಮುಚ್ಛಯಗಳಿಗೂ ಬೆಂಕಿ ಹಚ್ಚಲಾಗಿದೆ. ಉದ್ರಿಕ್ತ ಜನರನ್ನು ಚದುರಿಸಲು ಪೊಲೀಸರು ಭಾರೀ ಹೋರಾಟವನ್ನೇ ನಡೆಸುತ್ತಿದ್ದಾರೆ.

ಜಂಗ್ಲೇಶ್ವರ್‌ ಪ್ರದೇಶದಲ್ಲೂ ಧಾರ್ಮಿಕ ಸ್ಥಳವೊಂದಕ್ಕೆ ಉದ್ರಿಕ್ತರು ಬೆಂಕಿ ಹಚ್ಚಿದ್ದು , ಅಲ್ಲಿ ಪೊಲೀಸರು ಗೋಲಿಬಾರ್‌ ನಡೆಸಿದ್ದಾರೆ.

ಸತ್ತವರ ಸಂಖ್ಯೆ 140 ಕ್ಕೂ ಹೆಚ್ಚು ?

ಗೋದ್ರಾ ರೈಲು ದುರಂತದ ನಂತರ, ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ 140 ಕ್ಕೂ ಹೆಚ್ಚು ಎಂದು ವರದಿಗಳು ತಿಳಿಸಿದ್ದು, ಆರ್ಥಿಕ ನಗರಿ ಅಹಮದಾಬಾದ್‌ ಒಂದರಲ್ಲೇ ಸತ್ತವರ ಸಂಖ್ಯೆ 50 ದಾಟಿದೆ ಎನ್ನಲಾಗಿದೆ. ಅಹಮದಾಬಾದ್‌ನ ಚಮ್ನಾಪುರದಲ್ಲಿ ಗುರುವಾರ 30 ಜನರ ಸಜೀವ ದಹನ ನಡೆದಿದೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X