ಗುಜರಾತ್‌ ಬಂದ್‌ : ಬರೋಡಾದಲ್ಲಿ ಹಿಂಸಾಚಾರ, ಇರಿತಕ್ಕೆ ಒಬ್ಬ ಬಲಿ

ಅಹಮದಾಬಾದ್‌: ವಿಶ್ವ ಹಿಂದೂಪರಿಷತ್‌ ಕರೆ ನೀಡಿದ್ದ ಗುಜರಾತ್‌ ಬಂದ್‌ನಲ್ಲಿ ಹಿಂಸಾಚಾರ ಕಾಣಿಸಿಕೊಂಡಿದ್ದು , ಬರೋಡದಲ್ಲಿ ಆಟೋ ಚಾಲಕನೊಬ್ಬ ಇರಿತಕ್ಕೆ ಬಲಿಯಾಗಿದ್ದಾನೆ.

ಬರೋಡಾದ ಕರೇಲಿಬಾಗ್‌ ಪ್ರದೇಶದಲ್ಲಿ ಕೆಲವು ಅಜ್ಞಾತ ದುಷ್ಕರ್ಮಿಗಳು ಆಟೋ ಚಾಲಕನೊಬ್ಬನನ್ನು ಗುರುವಾರ ಮುಂಜಾನೆ ಇರಿದು ಕೊಂದಿದ್ದಾರೆ. ಪಾಣಿ ಗೇಟ್‌ ಪ್ರದೇಶದಲ್ಲೂ ಹಿಂಸಾಚಾರ ಕಾಣಿಸಿಕೊಂಡಿದ್ದು , ಟ್ರಕ್‌ ಕ್ಲೀನರ್‌ ಇರಿತದಿಂದ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸಬರಮತಿ ಎಕ್ಸ್‌ಪ್ರೆಸ್‌ ರೈಲ್‌ಗೆ ಕೆಲವು ದುಷ್ಕರ್ಮಿಗಳು ಬುಧವಾರ ಹಚ್ಚಿದ ಬೆಂಕಿಯಲ್ಲಿ 58 ಕರ ಸೇವಕರು ಸಾವಿಗೀಡಾದ್ದನ್ನು ಪ್ರತಿಭಟಿಸಿ, ವಿಶ್ವ ಹಿಂದೂ ಪರಿಷತ್‌ ಗುರುವಾರ ಈ ಬಂದ್‌ಗೆ ಕರೆ ನೀಡಿದೆ.

ಈ ನಡುವೆ ಬರೋಡ, ಲೂನವಾಡಗಳಲ್ಲಿ ಅನಿರ್ಧಿಷ್ಟಾವಧಿ ಕರ್ಫ್ಯೂ ಹೇರಲಾಗಿದೆ. ಸಬರಮತಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಲಾಗಿದ್ದ ಗೋಧ್ರಾ ನಗರದಲ್ಲಿ ಹೇರಲಾಗಿದ್ದ ಅನಿರ್ದಿಷ್ಟಾವಧಿಯ ಕರ್ಫ್ಯೂ ಮುಂದುವರಿಸಲಾಗಿದೆ. ರೈಲಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 40 ಮಂದಿಯನ್ನು ಈವರೆಗೆ ಬಂಧಿಸಲಾಗಿದೆ. ರಾಮಸೇವಕರು ಪ್ರಯಾಣಿಸುತ್ತಿದ್ದ ಈ ರೈಲಿಗೆ ಬೆಂಕಿ ಹಚ್ಚಿದ ಪರಿಣಾಮ- 25 ಮಹಿಳೆಯರು, 15 ಮಕ್ಕಳು ಸೇರಿದಂತೆ ಕನಿಷ್ಠ 58 ಮಂದಿ ಸಾವಿಗೀಡಾಗಿದ್ದಾರೆ ಹಾಗೂ 43 ಮಂದಿ ಗಾಯಗೊಂಡಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+