ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬನ್ನೇರುಘಟ್ಟ ಬಳಿ ‘ವಿಜ್ಞಾನ ನಗರಿ’, ಬನಶಂಕರಿಯಲ್ಲಿ ‘ವಿಜ್ಞಾನ ಭವನ’

By Staff
|
Google Oneindia Kannada News

ಬೆಂಗಳೂರು : ಬೆಂಗಳೂರು ಹೊರವಲಯ ಬನ್ನೆರುಘಟ್ಟ ಬಳಿ ಶೀಘ್ರವೇ ‘ವಿಜ್ಞಾನ ನಗರಿ’ಹಾಗೂ ಬನಶಂಕರಿಯಲ್ಲಿ ವಿಜ್ಞಾನ ಭವನ ತಲೆ ಎತ್ತಲಿದೆ. ಈ ವಿಷಯವನ್ನು ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವೆ ನಫೀಸಾ ಫಜಲ್‌ ಗುರುವಾರ ಇಲ್ಲಿ ತಿಳಿಸಿದ್ದಾರೆ.

ಯೋಜನೆ, ಸಾಂಸ್ಥಿಕ ಹಣಕಾಸು, ಸಾಂಖ್ಯಿಕ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಏರ್ಪಡಿಸಿದ್ದ ಸರ್‌.ಎಂ. ವಿಶ್ವೇಶ್ವರಯ್ಯ ಹಾಗೂ ಸರ್‌.ಸಿ.ವಿ. ರಾಮನ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಸಚಿವರು, ಬನ್ನೇರುಘಟ್ಟ ಬಳಿಯ 150 ಎಕರೆ ಪ್ರದೇಶದಲ್ಲಿ ಸೈನ್ಸ್‌ ಸಿಟಿ ನಿರ್ಮಿಸಲಾಗುವುದು ಎಂದು ತಿಳಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನದ ಹೊಸ ಹೊಸ ಆವಿಷ್ಕಾರ- ಸಂಶೋಧನೆಗಳ ಮಾದರಿ ವಸ್ತುಗಳನ್ನು ಈ ನಗರಿಯಲ್ಲಿ ಪ್ರದರ್ಶನಕ್ಕಿಡಲಾಗುವುದು. ವಿಜ್ಞಾನ ನಗರಿಯ ಸ್ಥಾಪನೆಗೆ ಈಗಾಗಲೇ ಸಮೀಕ್ಷೆ ನಡೆದಿದೆ ಎಂದು ತಿಳಿಸಿದರು.

ದೇಶ ವಿದೇಶದ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಬಳಿಯೇ ತಲೆ ಎತ್ತಲಿರುವ ವಿಜ್ಞಾನ ನಗರಿ ಕೂಡ ಪ್ರವಾಸಿಗಳ ತಾಣವಾಗಿ ಮಾರ್ಪಡಲಿದೆ ಜೊತೆಗೆ ಇದು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಉಪಯುಕ್ತ ವೈಜ್ಞಾನಿಕ ಮಾಹಿತಿಗಳನ್ನು ನೀಡಲಿದೆ. ವಿಜ್ಞಾನ ಮಾಹಿತಿ ಕೇಂದ್ರ ಸ್ವರೂಪದಲ್ಲಿ ಇದು ನಿರ್ಮಾಣವಾಗಲಿದೆ ಎಂದು ಫಜಲ್‌ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಿಜ್ಞಾನಿಗಳಿಗೆಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X