ನಿರುದ್ಯೋಗಿಗಳಿಗೆ ಖಾತರಿ ಉದ್ಯೋಗ, ಗ್ರಾಮೀಣರಿಗೆ ಆರೋಗ್ಯ ವಿಮೆ

ನವದೆಹಲಿ : ದೇಶದಲ್ಲಿನ ಅತ್ಯಂತ ಹಿಂದುಳಿದ ಜಿಲ್ಲೆಗಳ ನಿರುದ್ಯೋಗಿಗಳಿಗೆ ಖಾತರಿ ಉದ್ಯೋಗ ಕಲ್ಪಿಸುವ ಜಯಪ್ರಕಾಶ್‌ ರೋಜ್‌ಗಾರ್‌ ಗ್ಯಾರಂಟಿ ಯೋಜನೆಯನ್ನು 2002-03 ನೇ ಇಸವಿಯ ಬಜೆಟ್‌ ಭಾಷಣದಲ್ಲಿ ವಿತ್ತ ಸಚಿವ ಯಶವಂತ ಸಿನ್ಹಾ ಪ್ರಕಟಿಸಿದ್ದಾರೆ.

ಲೋಕ ನಾಯಕ ಜಯಪ್ರಕಾಶ ನಾರಾಯಣ್‌ ಅವರ ಜನ್ಮ ಶತಾಬ್ಧಿ ನೆನಪಿನಲ್ಲಿ ಪ್ರಾರಂಭಿಸಲಾಗುತ್ತಿರುವ ಈ ಯೋಜನೆ ಹಿಂದುಳಿದ ಜಿಲ್ಲೆಗಳಿಗೆ ಸೇರಿದ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿಕೊಡುವ ಗುರಿ ಹೊಂದಿದೆ ಎಂದು ಸಿನ್ಹಾ ತಿಳಿಸಿದರು.

ಜನರಕ್ಷಾ : ಗ್ರಾಮೀಣ ಜನತೆಗೆ ಉತ್ತರ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುವ ಜನರಕ್ಷಾ ಎನ್ನುವ ನೂತನ ವಿಮಾ ಯೋಜನೆಯನ್ನು ಸಿನ್ಹಾ ಪ್ರಕಟಿಸಿದರು. ಈ ಯೋಜನೆಯಡಿ- ದಿನಕ್ಕೆ 1 ರುಪಾಯಿ ಪ್ರೀಮಿಯಂನಂತೆ ಹಣ ತುಂಬುವ ಪಾಲಿಸಿದಾರರು, ವಾರ್ಷಿಕ 30 ಸಾವಿರ ರುಪಾಯಿವರೆಗಿನ ಚಿಕಿತ್ಸೆಯನ್ನು ಆಯ್ದ ಉತ್ತಮ ಆಸ್ಪತ್ರೆಗಳಲ್ಲಿ ಪಡೆಯಬಹುದು.

(ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+