ದೇಶೀಯ ವೈದ್ಯ ಪದ್ಧತಿಗೆ ಉತ್ತೇಜನ, ಕೃಷಿ - ಆರ್ಥಿಕ ವಲಯಕ್ಕೆ ಒತ್ತು

ನವದೆಹಲಿ : ಕೇಂದ್ರ ಅರ್ಥ ಸಚಿವ ಯಶವಂತಸಿನ್ಹ ಅವರು ಗುರುವಾರ ಮಂಡಿಸಿದ 2002-03 ಕೇಂದ್ರ ಆಯವ್ಯಯ ಸಾಮಾನ್ಯನಿಗೆ ಹೊರೆಯಾದ ಬಜೆಟ್‌ ಎಂದು ಪ್ರತಿಪಕ್ಷಗಳು ಬಣ್ಣಿಸಿದ್ದರೆ, ಇದೊಂದು ಶ್ರೀಸಾಮಾನ್ಯನಿಗೆ ಹೊರೆಯಾಗದ ಅಭಿವೃದ್ಧಿ ಬಜೆಟ್‌ ಎಂದು ಸ್ವತಃ ಸಿನ್ಹ ಅವರೇ ಘೋಷಿಸಿದ್ದಾರೆ.

ಈ ಬಾರಿಯ ಬಜೆಟ್‌ನಲ್ಲಿ ಕೃಷಿ ಹಾಗೂ ಆರ್ಥಿಕ ವಲಯಕ್ಕೆ ಆದ್ಯತೆ ನೀಡಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ದೇಶೀಯ ವೈದ್ಯ ಪದ್ಧತಿಗೆ ಉತ್ತೇಜನ ನೀಡಲಾಗಿದೆ. ಬಜೆಟ್‌ ಮುಖ್ಯಾಂಶಗಳು :

  • ಸಾಂಸ್ಥಿಕ ಆದಾಯ ತೆರಿಗೆಯಲ್ಲೂ ಬದಲಾವಣೆ ಇಲ್ಲ
  • ಅನಿವಾಸಿ ಭಾರತೀಯರಿಗೆ ವಿದೇಶೀ ಕರೆನ್ಸಿ ರೂಪದಲ್ಲೇ ಹಣವನ್ನು ಸ್ವದೇಶಕ್ಕೆ ಕಳುಹಿಸಲು ಅವಕಾಶ.
  • ಅನಿವಾಸಿ ಭಾರತೀಯರ ಠೇವಣಿ ಯೋಜನೆಗಳಿಗೆ ಸಂಪೂರ್ಣ ಪರಿವರ್ತನೆಯ ಅವಕಾಶ.
  • ಮ್ಯುಚುಯಲ್‌ ಫಂಡ್‌ಗಳಿಗೆ ನೀಡುತ್ತಿರುವ ತೆರಿಗೆ ವಿನಾಯಿತಿ ಮುಂದುವರಿಕೆ
  • ದೇಶೀಯ ವೈದ್ಯ ಪದ್ಧತಿಗೆ ಉತ್ತೇಜನ
  • ಕೃಷಿ ಸಂಶೋಧನೆಗೆ ಹೆಚ್ಚಿನ ಅನುದಾನ
  • ಕಿಸಾನ್‌ಕಾರ್ಡ್‌ ಯೋಜನೆಗೆ ಮತ್ತುಷ್ಟು ಪ್ರೋತ್ಸಾಹ
  • ರಸ್ತೆ, ರೈಲು, ವಿದ್ಯುತ್‌ ಅಭಿವೃದ್ಧಿ ಯೋಜನೆ ಗಾತ್ರ 37919 ಕೋಟಿ ರುಪಾಯಿ
  • ಶ್ರೀಸಾಮಾನ್ಯನ ಪಾಲಿಗೆ ಹೊರೆಯಾದ ಬಜೆಟ್‌ - ಪ್ರತಿಪಕ್ಷಗಳ ಟೀಕೆ
  • ಕೃಷಿ ಹಾಗೂ ಹಣಕಾಸು ವಲಯಕ್ಕೆ ಹೆಚ್ಚಿನ ಒತ್ತು
  • ಜನಸಾಮಾನ್ಯರಿಗೆ ಹೊರೆಯಾಗದ ಅಭಿವೃದ್ಧಿ ಪರ ಬಜೆಟ್‌ - ಸಿನ್ಹ ಘೋಷಣೆ
  • ಸಾರ್ವತ್ರಿಕ ಪ್ರಾಥಮಿಕ ಶಿಕ್ಷಣಕ್ಕೆ 1650 ಕೋಟಿ ರುಪಾಯಿ
  • ಯಂತ್ರೋಪಕರಣಗಳ ಮೇಲಿನ ಅಬ್ಕಾರಿ ಸುಂಕ ಇಳಿಕೆ
  • ಮುಂದಿನ ಆರ್ಥಿಕ ವರ್ಷದಲ್ಲಿ ಬಂಡವಾಳ ವಾಪಸಾತಿ ಗುರಿ - 12 ಸಾವಿರ ಕೋಟಿ ರುಪಾಯಿ
  • ಪಡಿತರ ಸಕ್ಕರೆ ಬೆಲೆ 13.50 ರು.
  • ಆರು ಪ್ರವಾಸೋದ್ಯಮ ನಿಗಮಗಳ ಆರಂಭ
  • ಬಂಡವಾಳ ಹೂಡಿಕೆದಾರರ ರಕ್ಷಣೆಗೆ ಕ್ರಮ
  • ಯುಟಿಐ ಕಾಯಿದೆಯಲ್ಲಿ ಶಾಸನಾತ್ಮಕ ಬದಲಾವಣೆ
  • ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಚತುರ್ಭುಜ ಯೋಜನೆ
  • ಸೇವಾ ತೆರಿಗೆ ವ್ಯಾಪ್ತಿಗೆ ಕೇಬಲ್‌ ಆಪರೇಟರ್‌ಗಳು
  • ಭೂಕಂಪದ ಶೇ.2ರಷ್ಟು ಉಪಕರ ರದ್ದು
  • ಜೀವವಿಮಾ ಕಂಪನಿಗಳು ಸೇವಾ ತೆರಿಗೆ ಪಾವತಿಸಬೇಕು
  • ನೇರ ತೆರಿಗೆಯ ಗುರಿ 91,585 ಕೋಟಿ ರುಪಾಯಿ
  • ಐದು ಲಕ್ಷ ರುಪಾಯಿ ಮೇಲ್ಪಟ್ಟ ಆದಾಯದ ಮೇಲೆ ಯಾವುದೇ ತೆರಿಗೆ ರಿಯಾಯಿತಿ ಇಲ್ಲ
  • ತೆರಿಗೆ ವಲಯದಿಂದ ಒಟ್ಟು 172,965 ಕೋಟಿ ರುಪಾಯಿ ಆದಾಯ ನಿರೀಕ್ಷೆ
(ಇನ್‌ಫೋವಾರ್ತೆ)
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+