ಬಜೆಟ್‌ ಮಂಡನೆ ಪ್ರಾರಂಭ : ದೇವೇಗೌಡ ಪ್ರಮಾಣ ವಚನ ಸ್ವೀಕಾರ

ನವದೆಹಲಿ : ಇಡೀ ದೇಶ ಎದುರು ನೋಡುತ್ತಿರುವ 2002- 03 ನೇ ಇಸವಿಯ ಬಜೆಟ್‌ ಮಂಡನೆ ಪ್ರಾರಂಭವಾಗಿದ್ದು, ಕಲಾಪದ ಪ್ರಾರಂಭಕ್ಕೆ ಕನಕಪುರ ಲೋಕಸಭಾ ಕೇತ್ರ ಮರು ಚುನಾವಣೆಯಲ್ಲಿ ಆಯ್ಕೆಯಾದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಫೇ.21 ರಂದು ನಡೆದ ಮರು ಚುನಾವಣೆಗಳಲ್ಲಿ ಲೋಕಸಭೆಗೆ ಹೊಸತಾಗಿ ಆಯ್ಕೆಯಾದ ಸದಸ್ಯರು, ಅಧಿಕಾರ ಮತ್ತು ಗೋಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದರು. ಕನಕಪುರ ಕ್ಷೇತ್ರದಿಂದ ಆಯ್ಕೆಯಾಗಿರುವ ದೇವೇಗೌಡ ಅವರು ಕನ್ನಡದಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಬುಧವಾರ ರೈಲಿಗೆ ಸಬರಮತಿ ಎಕ್ಸ್‌ಪ್ರೆಸ್‌ ರೈಲಿಗೆ ಬೆಂಕಿ ಹಚ್ಚಿದ ಪ್ರಕರಣ ಸದನದಲ್ಲಿ ಪ್ರತಿಧ್ವನಿಸಿತು. ಕಲಾಪದ ಪ್ರಾರಂಭದಲ್ಲೇ, ದುರಂತದ ವರದಿಗಳನ್ನು ಪ್ರಕಟಿಸಿದ್ದ ಪತ್ರಿಕೆಗಳನ್ನು ಹಿಡಿದು ಸದನದ ಬಾವಿಗೆ ಧುಮುಕಿದ ಆಡಳಿತಾರೂಢ ಬಿಜೆಪಿ ಸದಸ್ಯರು ಪ್ರತಿಭಟನೆ ವ್ಯಕ್ತಪಡಿಸಿದರು. ಸದನದಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬರುವಂತೆ ಸಭಾಪತಿ ಬಾಲಯೋಗಿ ಅವರು ಉದ್ರಿಕ್ತ ಸದಸ್ಯರಿಗೆ ಮನವಿ ಮಾಡಿ, ಕಲಾಪದ ಮುಂದಿನ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+