ಸವಾಲುಗಳ ನಡುವೆಯೂ ದೇಶದ ಆರ್ಥಿಕ ಸ್ಥಿತಿ ಸದೃಢ- ಸಿನ್ಹಾ
ನವದೆಹಲಿ : ಜನವರಿ 26 ರ ಗುಜರಾತ್ ಭೂಕಂಪದಿಂದ ಡಿಸೆಂಬರ್ 13 ರ ಸಂಸತ್ ಭವನದ ಮೇಲಿನ ಭಯೋತ್ಪಾದಕರ ದಾಳಿಯವರೆಗೆ 2001 ನೇ ಇಸವಿ ಅನೇಕ ದುರಂತಗಳಿಗೆ ಕಾರಣವಾದ ವರ್ಷ ಎಂದು ವಿತ್ತ ಸಚಿವ ಯಶವಂತ ಸಿನ್ಹಾ ತಮ್ಮ 2002-2003 ನೇ ಸಾಲಿನ ಕೇಂದ್ರ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ದುರಂತಗಳು ವಿತ್ತ ಕ್ಷೇತ್ರದ ಮೇಲೆ ಪರಿಣಾಮ ಬೀರಿವೆ ಎಂದು ಅಭಿಪ್ರಾಯಪ್ಟಟಿರುವ ಸಿನ್ಹಾ, 2001 ನೇ ಇಸವಿಯಲ್ಲಿ ಜಾಗತಿಕ ವಿತ್ತ ಬೆಳವಣಿಗೆ ಶೇ.2.4 ರಷ್ಟು ಕುಸಿದಿದೆ , 7 ಏರುಮುಖದ ವರ್ಷಗಳ ನಂತರ ಭಯೋತ್ಪಾದಕರ ಹಾವಳಿಯಿಂದ ಕಳೆದ ವರ್ಷ ವಿತ್ತ ಕ್ಷೇತ್ರ ನಷ್ಟ ಅನುಭವಿಸಿದೆ ಎಂದಿದ್ದಾರೆ.
ಪ್ರಸಕ್ತ ವರ್ಷ ಶೇ.5.4 ರಷ್ಟು ಆರ್ಥಿಕ ಬೆಳವಣಿಗೆ ನಿರೀಕ್ಷಿಸಲಾಗಿದೆ. ಆರ್ಥಿಕ ಕ್ಷೇತ್ರದ ಮೂಲಭೂತ ಅಂಶಗಳು ಬಲವಾಗಿದ್ದು- 50 ಬಿಲಿಯನ್ ಡಾಲರ್ ದಾಟಿದ ವಿದೇಶಿ ವಿನಿಮಯ, 60 ಮಿಲಿಯನ್ ಟನ್ ದಾಟಿದ ಆಹಾರ ಧಾನ್ಯ ಸಂಗ್ರಹಣೆಯನ್ನು ಸಿನ್ಹಾ ಹೆಸರಿಸಿದ್ದಾರೆ. ಇದೇ ಅವಧಿಯಲ್ಲಿ ಆರ್ಥಿಕ ಹಿಂಜರಿತ ಶೇ.1.1 ರಷ್ಟು ಮಾತ್ರ ಎಂದು ಅವರು ತಿಳಿಸಿದ್ದಾರೆ.
ಅನೇಕ ಸವಾಲುಗಳನ್ನು ಎದುರಿಸಿಯೂ ದೇಶದ ದೇಶ ಆರ್ಥಿಕ ಸ್ಥಿತಿ ಬಲವಾಗಿದೆ. ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುಧಿವ ಮಟ್ಟಿಗೆ ಆಯವ್ಯಯವನ್ನು ತೂಗಿಸುವುದೇ ತಮ್ಮ ಮುಂದಿನ ಸವಾಲಾಗಿದೆ ಎಂದು ಸಿನ್ಹಾ ಹೇಳಿದರು.
(ಏಜೆನ್ಸೀಸ್)












Click it and Unblock the Notifications