ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ತಿಂಗಳೊಳಗೆ 12,200 ಸರ್ಕಾರಿ ಹುದ್ದೆಗಳ ರದ್ದು

By Staff
|
Google Oneindia Kannada News

ನವದೆಹಲಿ : ಎರಡು ವರ್ಷಗಳಿಂದ ಏರಿಸದಿದ್ದ ರಸಗೊಬ್ಬರದ ಬೆಲೆ ಈ ಬಾರಿಯ ಬಜೆಟ್‌ನಲ್ಲಿ ಏರಿಕೆ ಕಂಡಿದೆ. ಯೂರಿಯಾ ಬೆಲೆ ಶೇ.5ರಷ್ಟು ಹೆಚ್ಚಳವಾಗಿದೆ. ಯಶವಂತ ಸಿನ್ಹ ರಸಗೊಬ್ಬರ ಬೆಲೆ ಏರಿಕೆ ಪ್ರಸ್ತಾಪ ಮಂಡಿಸಿದಾಗ, ಪ್ರತಿಪಕ್ಷ ನಾಯಕರು ಗದ್ದಲ ಮಾಡಿ ಪ್ರತಿಭಟಿಸಿದರು.

ರಾಜ್ಯಗಳಿಗೆ ಕೇಂದ್ರ ನೀಡುವ ಆರ್ಥಿಕ ಅನುದಾನ ಕಡಿತ ಮಾಡಿರುವುದರಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ನಿವಾರಣೆಗೆ ಬರುವ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯಗಳ ಸುಧಾರಣೆ ಕ್ರಮಗಳಿಗೆ 12,300 ಕೋಟಿ ರುಪಾಯಿ ಮೀಸಲಿಡಲಾಗಿದೆ. ತೆರಿಗೆ ಸುಧಾರಣೆಗೆ ನಿರ್ದಿಷ್ಟ ಕ್ರಮ ಪ್ರಕಟಿಸಲಾಗಿದೆ. ಮೊಬೈಲ್‌ ಫೋನ್‌ ಸೆಟ್‌, ಪೇಜರ್‌ ಅಗ್ಗ. ಬಜೆಟ್‌ ಮುಖ್ಯಾಂಶಗಳು :

  • ಮನರಂಜನಾ ಉದ್ಯಮಕ್ಕೆ ವಿಶೇಷ ನೆರವು
  • ವಿತ್ತೀಯ ನಿರ್ವಹಣೆಗೆ ವಿಶೇಷ ಕಾಯಿದೆ
  • ಅಂಚೆದರ ಅಲ್ಪ ಹೆಚ್ಚಳ
  • ಜವಳಿ ಕ್ಷೇತ್ರಕ್ಕೆ ವಿಶೇಷ ಸವಲತ್ತು
  • ಅನ್ನಪೂರ್ಣ ಗ್ರಾಮೀಣ ರೋಜಗಾರ್‌ ಯೋಜನೆಗೆ 4440 ಕೋಟಿ ರುಪಾಯಿ ನಿಗದಿ
  • ಸರ್ಕಾರಿ ವೆಚ್ಚ ಕಡಿತಕ್ಕೆ ದಿಟ್ಟ ನಿರ್ಧಾರ
  • ಮಾರ್ಚ್‌ 2002ರೊಳಗೆ 12,200 ಸರ್ಕಾರಿ ಹುದ್ದೆ ರದ್ದು
  • ಯೂರಿಯಾ ಬೆಲೆ ಶೇ.5 ಹೆಚ್ಚಳ (ಎರಡು ವರ್ಷದಿಂದ ಗೊಬ್ಬರದ ಬೆಲೆ ಏರಿಸಿರಲಿಲ್ಲ)
  • ನಿವೃತ್ತಿ ಯೋಜನೆ ಪರಿಶೀಲನೆಗೆ ತಜ್ಞರ ಸಮಿತಿ
  • ಚಹಾ ಮೇಲಿನ ಅಬಕಾರಿ ಸುಂಕ ಇಳಿಕೆ
  • ಮೊಬೈಲ್‌ ಫೋನ್‌ ಸೆಟ್‌, ಪೇಜರ್‌ ಅಗ್ಗ
  • ಸಕ್ಕರೆ ಮೇಲಿನ ಕಡ್ಡಾಯ ಲೆವಿ ಕಡಿತ
  • ಸಿಮೆಂಟ್‌ ಮೇಲಿನ ಅಬ್ಕಾರಿ ಸುಂಕ ಇಳಿಕೆ
  • ಮುಂದಿನ ನಾಲ್ಕು ವರ್ಷಗಳಲ್ಲಿ ಹೊಸ ನೇಮಕಾತಿ ಪ್ರಮಾಣ ಒಟ್ಟು ಹುದ್ದೆಗಳ ಶೇ 1ಕ್ಕೆ
  • ಸೈನಿಕರಿಗೆ ಗೃಹ ನಿರ್ಮಾಣಕ್ಕೆ ವಿಶೇಷ ಯೋಜನೆ
  • ಹೊಸ ಕ್ಷೇತ್ರಗಳಿಗೂ ಸೇವಾ ತೆರಿಗೆ ವಿಸ್ತರಣೆ
  • ರಾಜ್ಯಗಳ ಸುಧಾರಣೆ ಕ್ರಮಗಳಿಗೆ 12,300 ಕೋಟಿ ರುಪಾಯಿ
(ಇನ್‌-ಫೋ ವಾರ್ತೆ)
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X