‘ಕರ್ನಾಟಕ ವಿಭಜನೆ ಮಹಿಳೆಯರ ದೃಷ್ಟಿ’ ಕುರಿತು ವಿಚಾರ ಗೋಷ್ಠಿ
ಹೊಸಪೇಟೆ : 69ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತುಮಕೂರು ಇನ್ನೂ ಸಜ್ಜಾಗುತ್ತಿರುವಾಗಲೇ, ಹೊಸಪೇಟೆಯ ಮಲ್ಲಿಗೆ ಹೋಟೆಲ್ ಸಭಾಂಗಣ ಚುಟುಕ ಸಾಹಿತ್ಯ ಸಮ್ಮೇಳನಕ್ಕೆ ಅಣಿಯಾಗಿದೆ. ಜನವರಿ 6ರಂದು ಇಲ್ಲಿ ಚುಟುಕಗಳ ಹೊಳೆಯೇ ಹರಿಯಲಿದೆ.
ಈ ವಿಷಯವನ್ನು ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿ ಪ್ರೊ. ಡಿ.ಡಿ. ಮುತಾಲಿಕಾ ದೇಸಾಯರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ಸಮ್ಮೇಳನವನ್ನು ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ‘ಸಾಮಾಜಿಕ ಸಮಸ್ಯೆಗಳ ಪರಿಹಾರ ’ ಹಾಗೂ ‘ಕರ್ನಾಟಕ ವಿಭಜನೆ ಮಹಿಳೆಯರ ದೃಷ್ಟಿ’ ಎಂಬ ವಿಷಯಗಳ ಬಗ್ಗೆ ವಿಚಾರಗೋಷ್ಠಿಯನ್ನೂ ಏರ್ಪಡಿಸಲಾಗಿದೆ.
ಪ್ರತ್ಯೇಕತೆಯ ಕೂಗು ಕರ್ನಾಟಕದಲ್ಲಿ ಕೇಳಿ ಬಂದಿರುವ ಸಂದರ್ಭದಲ್ಲಿ ನಡೆಯುತ್ತಿರುವ ಈ ವಿಚಾರ ಗೋಷ್ಠಿಗೆ ಮಹತ್ವ ಬಂದಿದೆ. ಸಮ್ಮೇಳನದಲ್ಲಿ ಎಳಂಜಿ ಹನುಮಂತಶೆಟ್ಟಿ, ಪ್ರೊ. ಯು. ರಾಘವೇಂದ್ರರಾವ್, ವಿರೂಪಾಕ್ಷ ನಾಯಕ, ಖಾಜಾ ಹುಸೇನ್, ಶ್ರೀಧರ ರಾಯಸಂ, ಟಿ.ಎಂ. ಉಷಾರಾಣಿ, ಎಚ್. ಬಾಲರಾಜ್, ಸುಧಾ ಭಾಸ್ಕರ್ ಮೊದಲಾದವರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications