ಶಿರಾಡಿ ಬಳಿ ರಸ್ತೆ ಅಪಘಾತಕ್ಕೆ ಒಂದೇ ಕುಟುಂಬದ ಐವರ ಬಲಿ
ಪುತ್ತೂರು : ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಶಿರಾಡಿ ಸಮೀಪ ಹಿರ್ತಡ್ಕ ಎಂಬಲ್ಲಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.
ಶಿರ್ವದಿಂದ ಚೆನ್ನೈಯ ವೆಲಂಕಣಿಗೆ ಪ್ರವಾಸ ಹೊರಟ ಎರಡು ಕುಟುಂಬಗಳ ಸದಸ್ಯರನ್ನು ಹೊತ್ತೊಯ್ಯುತ್ತಿದ್ದ ಟಾಟಾ ಸುಮೋ ಮರಕ್ಕೆ ಅಪ್ಪಳಿಸಿದ್ದರಿಂದ ಈ ದುರಂತ ಸಂಭವಿಸಿದೆ. ಮೃತರನ್ನು ಶಿರ್ವ ಬಂಟಕಲ್‌ನ ಕ್ಸೇವಿಯರ್ ಸಲ್ಡಾನಾ (55), ಅವರ ಪತ್ನಿ ಅನ್ನಾ ಮೇರಿ(48), ಮಗ ಸ್ಟೀಫರ್ಡ್‌ಸ್ಟೀವನ್ ಸಲ್ಡಾನಾ (27), ಅಳಿಯ ಸ್ಯಾಮುಯೆಲ್ ಮಚಾದೋ(31), ಹಾಗೂ ಸಂಬಂಧಿ ಫ್ರಾನ್ಸಿಸ್ ಕ್ಸೇವಿಯರ್ ಎಂದು ಗುರುತಿಸಲಾಗಿದೆ.
ಸಿಂತಿಯಾ, ಲವಿನಾ, ಡಾ. ಫಲ್ಮೇಡಾ ಮತ್ತು ಕಾರು ಚಾಲಕ ಶಂಕರ ಪೂಜಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications