ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಂದಿನಲ್ಲೇ ಮಕ್ಕಳಿಗುಣಿಸಿ ಶಾಸ್ತ್ರೀಯ ಸಂಗೀತ-ಡಾ.ಎಲ್‌.ಸುಬ್ರಹ್ಮಣ್ಯಂ

By Staff
|
Google Oneindia Kannada News

ಬೆಂಗಳೂರು: ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸುವ ಮೂಲಕ ಅವರಲ್ಲಿ ಸಂಗೀತದ ಬಗೆಗೆ ಒಲವನ್ನು ಬೆಳೆಸುವಂತೆ ಪ್ರಖ್ಯಾತ ಪಿಟೀಲು ವಾದಕ ಡಾ. ಎಲ್‌. ಸುಬ್ರಹ್ಮಣ್ಯಂ ಪೋಷಕರಿಗೆ ಕರೆ ನೀಡಿದ್ದಾರೆ.

ನಮ್ಮ ಯುವ ಜನತೆ ಪಾಶ್ಚಿಮಾತ್ಯ ಪಾಪ್‌ ಸಂಗೀತದಿಂದ ಆಕರ್ಷಿತರಾಗುತ್ತಿದ್ದಾರೆ. ಭಾರತೀಯ ಶಾಸ್ತ್ರೀಯ ಸಂಗೀತ, ಅದರಲ್ಲೂ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಉಳಿಸುವಲ್ಲಿ ವಿದೇಶಿಯರು ಗಮನಾರ್ಹ ಪಾತ್ರ ವಹಿಸುತ್ತಿದ್ದಾರೆ ಎಂದು ಸುಬ್ರಹ್ಮಣ್ಯಂ ಪಿಟಿಐಗೆ ತಿಳಿಸಿದ್ದಾರೆ.

ತಮ್ಮ ತಂದೆ ಹಾಗೂ ಗುರು ಲಕ್ಷ್ಮಿನಾರಾಯಣ್‌ ಹೆಸರಿನಲ್ಲಿ 1992 ರಿಂದ ಪ್ರತಿವರ್ಷ ಜಾಗತಿಕ ಸಂಗೀತ ಸಮ್ಮೇಳನ ನಡೆಸಿಕೊಂಡು ಬರುತ್ತಿರುವ ಸುಬ್ರಹ್ಮಣ್ಯಂ, ವಿವಿಧ ಸಂಸ್ಕೃತಿ ಹಾಗೂ ವಿಭಿನ್ನ ಶೋತೃಗಳನ್ನು ಒಂದೆಡೆ ಸೇರಿಸುವ ವೇದಿಕೆಗಳಾಗಿ ಈ ಸಂಗೀತ ಉತ್ಸವಗಳು ಕೆಲಸ ಮಾಡುತ್ತವೆ ಎನ್ನುತ್ತಾರೆ.

ಹಾಡುಗಾರ್ತಿ ಪತ್ನಿ ಕವಿತಾ ಕೃಷ್ಣಮೂರ್ತಿ ಅವರೊಂದಿಗೆ ಸುಬ್ರಹ್ಮಣ್ಯಂ ಅವರೀಗ ಅಧ್ಯಾತ್ಮಿಕ ಶಿವ ಶ್ಲೋಕಗಳ ಯೋಜನೆಯಲ್ಲಿ ತೊಡಗಿದ್ದಾರೆ. ಇನ್ನೊಂದು ತಿಂಗಳಲ್ಲಿ ಯೋಜನೆ ಪೂರ್ಣವಾಗುವ ವಿಶ್ವಾಸ ಅವರದು.

ಬೆಂಗಳೂರಲ್ಲಿ ಜಾಗತಿಕ ಸಂಗೀತ ಸಂಸ್ಥೆ

ಈ ಕನಸು ಇನ್ನೂ ಜೀವಂತವಾಗಿದೆ ಎನ್ನುತ್ತಾರೆ ಕವಿತಾ ಕೃಷ್ಣಮೂರ್ತಿ. ನಾವು ಈಗಷ್ಟೇ ಬೆಂಗಳೂರಿನಲ್ಲಿ ನೆಲೆಸಿದ್ದೇವೆ. ಇಲ್ಲಿ ಹೆಚ್ಚಿನ ಸಂಖ್ಯೆಯ ಹಾಗೂ ಗಂಭೀರ ಸಂಗೀತ ಪ್ರೇಮಿಗಳಿದ್ದಾರೆ. ಇಲ್ಲಿಯೇ ಜಾಗತಿಕ ಸಂಗೀತ ಸಂಸ್ಥೆಯನ್ನು ನಿರ್ಮಿಸುವ ಕನಸು ನಮ್ಮದು ಎಂದು ಕವಿತಾ ತಮ್ಮ ಕನಸಿನ ಬಗ್ಗೆ ಹೇಳುತ್ತಾರೆ.

ಸುಬ್ರಹ್ಮಣ್ಯಂ ಹಾಗೂ ಕವಿತಾ ದಂಪತಿಗಳಿಗೆ ಮೂವರು ಮಕ್ಕಳು. ಹಿರಿಯ ಮಗಳು ಸೀತಾ ಪಾಶ್ಚಾತ್ಯ ಹಾಗೂ ಕರ್ನಾಟಿಕ್‌ ಸಂಗೀತ ಕಲಿಯುತ್ತಿದ್ದಾಳೆ. ಮಗ ರಾಜು ಕೀಬೋರ್ಡ್‌ ಬಾರಿಸುತ್ತಾನೆ. ಅಂಬಿ ಕೂಡ ಸಂಗೀತ ಪ್ರೇಮಿ ಎನ್ನುತ್ತಾರೆ ಕವಿತಾ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X