ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸವರ್ಷದ ಆಚರಣೆಗೆ ‘ನಂದಿಬೆಟ್ಟಕ್ಕೆ’ ಹೋದೀರಿ ಜೋಕೆ!

By Staff
|
Google Oneindia Kannada News

ಬೆಂಗಳೂರು: ಅದು ಬೆಟ್ಟ ಇದು ಬೆಟ್ಟವೋ ನಂಜುಂಡ, ಕುಡಕರಿಗೆ ನಂದಿ ಬೆಟ್ಟವೋ ಎಂಬ ಅಪಖ್ಯಾತಿಗೆ ಗುರಿಯಾಗಿರುವ ಬೆಂಗಳೂರು ಬಳಿಯ ಹೆಸರಾಂತ ಗಿರಿಧಾಮ ನಂದಿಯಲ್ಲಿ ಹೊಸವರ್ಷದ ಸಂಭ್ರಮದ ಆಚರಣೆಗೆ ನಿಷೇಧ ಹೇರಲಾಗಿದೆ.

ಪ್ರತಿವರ್ಷ ಡಿಸೆಂಬರ್‌ 31ರ ರಾತ್ರಿ ಹೊಸವರ್ಷದ ಆಚರಣೆಗೆ ಇಲ್ಲಿಗೆ ಬರುವ ಮಂದಿ ಕುಡಿದು, ಕುಪ್ಪಳಿಸಿ, ತಿಂದುಂಡು ಬಿಸಾಡಿ, ಬಾಟಲಿಗಳನ್ನು ಒಡೆದು ಗಿರಿಧಾಮವನ್ನು ಹೊಲಸು ಮಾಡುತ್ತಿದ್ದರು. ಮಿಗಿಲಾಗಿ ಕುಡಿದ ಅಮಲಿನಲ್ಲಿ ಹಲವು ಅಹಿತಕರ ಘಟನೆಗಳೂ ನಡೆಯುತ್ತಿದ್ದವು.

ಈ ಬಾರಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕಾಗಿ ಹಾಗೂ ಗಿರಿಧಾಮದ ಸೌಂದರ್ಯ ಕಾಪಾಡುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಡಿ.31ರ ರಾತ್ರಿ 10 ಗಂಟೆಯಿಂದ ಗಿರಿಧಾಮದಲ್ಲಿ ನಿಷೇದಾಜ್ಞೆ ಜಾರಿ ಮಾಡಲು ನಿರ್ಧರಿಸಿವೆ.

ಗಿರಿಧಾಮದಲ್ಲಿರುವ ಕಾಯ್ದಿರಿಸಿದ ಕೊಠಡಿಗಳನ್ನು ಹೊರತು ಪಡಿಸಿ, ಡಿ.31ರ ರಾತ್ರಿ 10ರ ನಂತರ ಸಾರ್ವಜನಿಕರಿಗೆ ಬೆಟ್ಟದ ಪ್ರವೇಶ ನಿಷೇಧಿಸಲಾಗಿದೆ. ನಂದಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಕಲೂ ನಿರ್ಧರಿಸಲಾಗಿದೆ. ಈ ಕ್ರಮದಿಂದ ಹೊಸವರ್ಷ ಆಚರಿಸುವ ಹಲವರಿಗೆ ನಿರಾಶೆ ಆಗಬಹುದು. ಆದರೆ, ಸುರಕ್ಷತೆ ಮತ್ತು ಗಿರಿಧಾಮದ ಹಿತದೃಷ್ಟಿಯಿಂದ ಈ ಕ್ರಮ ಅನಿವಾರ್ಯವಾಗಿದೆ ಎಂದು ಚಿಕ್ಕಬಳ್ಳಾಪುರದ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಕಾನೂನು ಉಲ್ಲಂಘಿಸಿದರೆ, ದಂಡ ಕಟ್ಟಿಟ್ಟ ಬುತ್ತಿ , ಡಿ.31ರಂದು ನಂದಿ ಬೆಟ್ಟಕ್ಕೆ ಹೋದೀರಿ ಜೋಕೆ!

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X