ಎದೆ ತುಂಬಿ ಹಾಡುವ ಎಸ್.ಪಿ.ಬಾಲಸುಬ್ರಮಣ್ಯಂಗೆ ಸ್ವರಾಲಯ ಪ್ರಶಸ್ತಿ
ತಿರುವನಂತಪುರಂ : ಎದೆ ತುಂಬಿ ಹಾಡುವ ದಕ್ಷಿಣ ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕ ಎಸ್.ಪಿ.ಬಾಲಸುಬ್ರಮಣ್ಯಂ ಕಿರೀಟಕ್ಕೆ ಇನ್ನೊಂದು ಗರಿ. ಸಂಗೀತ ಕ್ಷೇತ್ರದಲ್ಲಿ ದೇಶಕ್ಕೆ ಸಲ್ಲಿಸಿರುವ ದೀರ್ಘಕಾಲಿಕ ಸೇವೆಗಾಗಿ ನೀಡುವ ಸ್ವರಾಲಯ ಪ್ರಶಸ್ತಿಗೆ ಎಸ್‌ಪಿಬಿಯನ್ನು ಆರಿಸಲಾಗಿದೆ.
ಪ್ರಶಸ್ತಿ 1 ಲಕ್ಷ ರುಪಾಯಿ ನಗದು, ಸ್ಮರಣಿಕೆ ಹಾಗೂ ಬಿನ್ನವತ್ತಳೆಯನ್ನು ಒಳಗೊಂಡಿರುತ್ತದೆ. ಆಯ್ಕೆ ಸಮಿತಿಯ ವಿಶೇಷ ಪ್ರಶಸ್ತಿಗಾಗಿ ಹಿರಿಯ ಹಿನ್ನೆಲೆ ಗಾಯಕಿ ಎಸ್.ಜಾನಕಿ ಅವರನ್ನು ಆಯ್ಕೆ ಮಾಡಲಾಗಿದೆ. ಈಕೆಗೆ ಕೊಡಲಿರುವ ಪ್ರಶಸ್ತಿ 50 ಸಾವಿರ ರುಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿರುತ್ತದೆ. ಸ್ವರಾಲಯ ಮತ್ತು ಕೈರಾಲಿ ಚಾನೆಲ್ ಈ ಪ್ರಶಸ್ತಿಗಳನ್ನು ಜನವರಿ 21ರಂದು ಪ್ರದಾನ ಮಾಡಲಿದೆ. ನಿಶಾಗಂಧಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಗಾಯಕ ಕೆ.ಜೆ.ಏಸುದಾಸ್ ಪ್ರಶಸ್ತಿಗಳನ್ನು ಪ್ರದಾನ ಮಾಡುವರು ಎಂದು ಸ್ವರಾಲಯದ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications