ರಾಜ್ಯದ ಸಂಘಟಿತ ಅಪರಾಧ ತಡೆ ಮಸೂದೆಗೆ ರಾಷ್ಟ್ರಪತಿ ಅಸ್ತು
ನವದೆಹಲಿ : ಕರ್ನಾಟಕದ ವಿಧಾನಸಭೆ ಅನುಮೋದಿಸಿದ್ದ ಸಂಘಟಿತ ಅಪರಾಧವನ್ನು ತಡೆಗಟ್ಟುವ ಮಸೂದೆಗೆ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಒಪ್ಪಿಗೆ ನೀಡಿದ್ದಾರೆ.
'ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಮಸೂದೆ-2000" ಅನ್ನು ಪ್ರಸಕ್ತ ವರ್ಷದ ಜನವರಿ ತಿಂಗಳಲ್ಲಿ ರಾಷ್ಟ್ರಪತಿಗಳ ಅಂಕಿತಕ್ಕೆ ಕಳಿಸಲಾಗಿತ್ತು . ಸಮಾಜಕ್ಕೆ ಪಿಡುಗಾಗಿ ಕಾಡುತ್ತಿರುವ ಸಂಘಟಿತ ಅಪರಾಧ ತಡೆ ಮಸೂದೆಗೆ ರಾಷ್ಟ್ರಪತಿಗಳು ಒಪ್ಪಿಗೆ ನೀಡಿದ್ದಾರೆ ಎಂದು ಗೃಹ ಸಚಿವಾಲಯದ ಮೂಲಗಳು ಶುಕ್ರವಾರ ತಿಳಿಸಿದ್ದಾರೆ
ಕೊಲೆ, ಕಳ್ಳ ಸಾಗಾಣಿಕೆ, ಮಾದಕ ದ್ರವ್ಯಗಳ ಮಾರಾಟ, ಹಣಕ್ಕಾಗಿ ಅಪಹರಣ ಇತ್ಯಾದಿ ಅಪರಾಧಗಳನ್ನು ತಡೆಗಟ್ಟಲು ಈ ಮಸೂದೆ ಉಪಯುಕ್ತವಾಗಿದೆ. ಇದೇ ಮಾದರಿಯ ಪೊಟೊ ಸುಗ್ರೀವಾಜ್ಞೆಯನ್ನು ಭಯೋತ್ಪಾದಕತೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊರಡಿಸಿದೆ.












Click it and Unblock the Notifications