ಜ.2 ರಿಂದ ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಸಭೆ
ತಿರುವನಂತಪುರಂ : ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು ಸಮಾನ ಪ್ರವಾಸೋದ್ಯಮ ಸಮಾನ ನೀತಿ ರೂಪಿಸಲು ದಕ್ಷಿಣ ಭಾರತದ ರಾಜ್ಯಗಳ ಪ್ರವಾಸೋದ್ಯಮ ಸಚಿವರ ಎರಡು ದಿನಗಳ ಸಮಾವೇಶ ಜನವರಿ 2 ರಿಂದ ಕೋವಳಂನಲ್ಲಿ ನಡೆಯಲಿದೆ.
ಅಂತರರಾಜ್ಯ ಸಂಪರ್ಕ, ಅಂತರರಾಜ್ಯ ಸಾರಿಗೆ ಹಾಗೂ ತೆರಿಗೆ, ದಕ್ಷಿಣ ಭಾರತ ರೈಲ್ವೆ ಜಾಲ, ಜಂಟಿ ಅಭಿವೃದ್ಧಿ ಉತ್ಪನ್ನಗಳು, ಮಾರುಕಟ್ಟೆ , ಇತ್ಯಾದಿ ವಿಷಯಗಳ ಕುರಿತು ಸಮಾವೇಶದಲ್ಲಿ ಚರ್ಚೆ ನಡೆಯಲಿದೆ ಎಂದು ಕೇರಳ ಪ್ರವಾಸೋದ್ಯಮ ಸಚಿವ ಕೆ.ವಿ. ಥಾಮಸ್ ಬುಧವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಶ್ರೀಲಂಕಾ, ಮಾಲ್ಡೀವ್ಸ್ ಹಾಗೂ ಮಾರಿಷಸ್‌ಗಳ ಪ್ರವಾಸೋದ್ಯಮ ಸಚಿವರು ಕೂಡ ಸಮಾವೇಶದಲ್ಲಿ ಭಾಗವಹಿಸುವರು. ಕೇಂದ್ರ ಪ್ರವಾಸೋದ್ಯಮ ಸಚಿವ ಜಗಮೋಹನ್ ಸಮಾವೇಶವನ್ನು ಉದ್ಘಾಟಿಸುವರು ಎಂದು ಥಾಮಸ್ ಹೇಳಿದರು. 2000-01 ನೇ ಸಾಲಿನಲ್ಲಿ ಕೇರಳ ಹೆಚ್ಚಿನ ಸಂಖ್ಯೆಯ ವಿದೇಶಿ ಹಾಗೂ ಸ್ವದೇಶಿ ಪ್ರವಾಸಿಗರನ್ನು ಆಕರ್ಷಿಸಿದೆ ಎಂದು ಅವರು ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications