ಡಿ.28ರ ಶುಕ್ರವಾರ ರಾಗಿಗುಡ್ಡದಲ್ಲಿ ಹನುಮಜಯಂತಿ ಉತ್ಸವ
ಬೆಂಗಳೂರು : ಜಯನಗರದ 9ನೇ ಬ್ಲಾಕ್‌ನಲ್ಲಿರುವ ರಾಗಿಗುಡ್ಡ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ಡಿ.28ರ ಶುಕ್ರವಾರ ಹನುಮ ಜಯಂತಿಯನ್ನು ವೈಭವದಿಂದ ಆಚರಿಸಲಾಗುತ್ತಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.
ಪ್ರತಿವರ್ಷದಂತೆ ಈ ವರ್ಷ ಕೂಡ ಹನುಮಜಯಂತಿ ಅಂಗವಾಗಿ ಪ್ರತಿದಿನ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 24ರಿಂದಲೇ ಆರಂಭವಾಗಿರುವ ಹನುಮಜಯಂತಿ ಉತ್ಸವ ಕಾರ್ಯಕ್ರಮಗಳು 2002ರ ಜನವರಿ 6ರವರೆಗೆ ನಡೆಯಲಿವೆ.
ಉತ್ಸವದ ನಿಮಿತ್ತ ಈ ಬಾರಿ ‘ಧಾರ್ಮಿಕ ವಸ್ತು ವಿಶೇಷ’ ಕುರಿತು ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಹೆಬ್ಬೂರು ಕೋದಂಡಾಶ್ರಮ ಮಠಾಧೀಶರಾದ ಶ್ರೀ ನಾರಾಯಣಾಶ್ರಮ ಸ್ವಾಮೀಜಿಯವರ ಸಾನಿಧ್ಯದಲ್ಲಿ ಕುಂಕುಮಾರ್ಚನೆ, ಲಲಿತಾ ಸಹಸ್ರನಾಮ, ಅಷ್ಟಲಕ್ಷ್ಮೀಪೂಜೆ, ಸತ್ಯನಾರಾಯಣ ಪೂಜೆ ಮೊದಲಾದ ಧಾರ್ಮಿಕ ವಿಧಿಗಳು ಜರುಗಲಿವೆ ಎಂದು ಪ್ರಕಟಣೆ ತಿಳಿಸಿದೆ.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications