ಫೆ. 21 ಕನಕಪುರ ಚುನಾವಣೆ: ದೇವೇಗೌಡರು ಸ್ಪರ್ಧಿಸುತ್ತಾರಾ?

ಬೆಂಗಳೂರು : ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರು ಸ್ಪರ್ಧಿಸುವ ಸಾಧ್ಯತೆಯಿರುವ ಕನಕಪುರ ಲೋಕಸಭಾ ಕ್ಷೇತ್ರದ ಮರು ಚುನಾವಣೆ 2002 ನೇ ಇಸವಿಯ ಫೆಬ್ರವರಿ 21 ರಂದು ನಡೆಯಲಿದೆ.

ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಹಾಗೂ ಲೋಕಸಭೆ ಮತ್ತು ವಿಧಾನಸಭೆ ಕ್ಷೇತ್ರಗಳ ಮರು ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ಜೆ.ಎಂ.ಲಿಂಗ್ಡೊ ಬುಧವಾರ ಪ್ರಕಟಿಸಿದರು. ರಾಜ್ಯದ ಕನಕಪುರ ಲೋಕಸಭಾ ಕ್ಷೇತ್ರ ಮಾತ್ರವಲ್ಲದೆ- ಇತರೆ 5 ರಾಜ್ಯಗಳ 5 ಲೋಕಸಭಾ ಕ್ಷೇತ್ರಗಳಿಗೂ ಫೆ. 21 ರಂದೇ ಚುನಾವಣೆ ನಡೆಯಲಿದೆ.

ಫೆಬ್ರವರಿ 14 ರಿಂದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ಸ್ಪರ್ಧಿಸುವ ಸಾಧ್ಯತೆಯಿರುವ ಆಂಡಿಪಟ್ಟಿ ವಿಧಾನಸಭಾ ಕ್ಷೇತ್ರದ ಚುನಾವಣೆಯೂ ಫೆ. 21 ರಂದು ನಡೆಯುವುದು. ಉತ್ತರಪ್ರದೇಶ, ಮಣಿಪುರಗಳ ವಿಧಾನಸಭೆ ಚುನಾವಣೆಯ ವೇಳಾ ಪಟ್ಟಿಯನ್ನೂ ಆಯೋಗ ಪ್ರಕಟಿಸಿದೆ. ಫೆ. 14, 18 ಮತ್ತು 21 ರಂದು ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆದರೆ, ಫೆ. 14 ಹಾಗೂ 21 ರಂದು ಮಣಿಪುರ ವಿಧಾನಸಭೆ ಚುನಾವಣೆಗಳು ನಡೆಯಲಿವೆ.

ತಮಿಳುನಾಡಿನ ಮೂರು, ಹರಿಯಾಣ, ಮಹಾರಾಷ್ಟ್ರ ಹಾಗೂ ರಾಜಸ್ತಾನ ರಾಜ್ಯಗಳ ತಲಾ ಒಂದೊಂದು ವಿಧಾನಸಭೆ ಕ್ಷೇತ್ರಗಳಿಗೆ ಫೆ.21 ರಂದು ಚುನಾವಣೆ ನಡೆಯುವುದು.

ಡಿ.26 ರಿಂದಲೇ ನೀತಿ ಸಂಹಿತೆ ಜಾರಿ

ಲೋಕಸಭೆ ಉಪ ಚುನಾವಣೆಗಳು ನಡೆಯುವ ಕ್ಷೇತ್ರಗಳಲ್ಲಿ ಡಿಸೆಂಬರ್‌ 26 ರ ಬುಧವಾರದಿಂದಲೇ ನೀತಿ ಸಂಹಿತೆ ಜಾರಿಯಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತರು ಪ್ರಕಟಿಸಿದ್ದಾರೆ. ಚುನಾವಣಾ ವೇಳಾಪಟ್ಟಿ ಕೆಳಗಿನಂತಿದೆ-

ಜನವರಿ 16 : ಚುನಾವಣೆಯ ಅಧಿಕೃತ ಪ್ರಕಟಣೆ
ಜನವರಿ 23 : ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ಜನವರಿ 24 : ನಾಮಪತ್ರ ಪರಿಶೀಲನೆ
ಜನವರಿ 28 : ನಾಮಪತ್ರ ವಾಪಸ್ಸಿಗೆ ಕೊನೆಯ ದಿನ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+