ಬಸವಣ್ಣ ಮತ್ತೆ ಸುದ್ದಿಯಲ್ಲಿ! ಬಸವ ಜಯಂತಿ ಸರ್ಕಾರಿಹಬ್ಬವಾದೀತೆ?
ಸಿಂದಗಿ: ಶರಣ ಬಸವಣ್ಣನವರ ಜನ್ಮ ಸ್ಥಳ, ಕಾರ್ಯಕ್ಷೇತ್ರ ಹಾಗೂ ಲಿಂಗೈಕ್ಯ ಕ್ಷೇತ್ರ ಕರ್ನಾಟಕವಾಗಿರುವುದರಿಂದ ಬಸವ ಜಯಂತಿಯನ್ನು ರಾಜ್ಯದ ಹಬ್ಬವನ್ನಾಗಿ ಆಚರಿಸಬೇಕು ಎಂದು ಕಲ್ಯಾಣ ನಾಡಿನ ಶರಣ ಪರಿಷತ್ತು ರಾಜ್ಯ ಸರಕಾರವನ್ನು ಆಗ್ರಹಿಸಿದೆ.
ಬಸವಣ್ಣನವರು ರಚಿಸಿದ ಸಮಗ್ರ ಸಾಹಿತ್ಯವೂ ಕನ್ನಡದಲ್ಲಿಯೇ ಇರುವುದರಿಂದ ಬಸವ ಜಯಂತಿಯನ್ನು ರಾಜ್ಯದಲ್ಲಿ ಅದ್ದೂರಿಯಿಂದ ಆಚರಿಸಬೇಕು ಎಂಬ ನಿರ್ಣಯವನ್ನು ಸೊಲ್ಲಾಪುರದಲ್ಲಿ ನಡೆದ 21ನೇ ಕಲ್ಯಾಣ ನಾಡಿನ ಶರಣ ಸಮ್ಮೇಳನದಲ್ಲಿ ಅಂಗೀಕರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಪ್ರತಿವರ್ಷ ಅಕ್ಷಯ ತದಿಗೆಯಂದು ಬಸವ ಜಯಂತಿಯನ್ನು ಸರಕಾರದ ಹಬ್ಬವನ್ನಾಗಿ ಆಚರಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ವಿಲಾಸ್‌ರಾವ್ ದೇಶ್‌ಮುಖ್ ಅವರನ್ನು ಶರಣ ಸಮ್ಮೇಳನ ಅಭಿನಂದಿಸಿತು. ಸಮ್ಮೇಳನದಲ್ಲಿ ಸ್ವೀಕರಿಸಿದ ಇತರ ನಿರ್ಣಯಗಳು :
- 2005-06 ನೇ ವರ್ಷ ಬಸವಣ್ಣನವರ 9ನೇ ಜನ್ಮ ಶತಾಬ್ದಿ ವರ್ಷ. ಇದನ್ನು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಚರಿಸಬೇಕು.
- ಸೊಲ್ಲಾಪುರ ಜಿಲ್ಲೆಯ ಮಂಗಳವೇಡೆ, ಸೊಲ್ಲಾಪುರ, ಲಾತೂರ ಜಿಲ್ಲೆಯ ದೇವನಹಳ್ಳಿ ಬಸವಣ್ಣನವರು ವಾಸಿಸಿದ ಮತ್ತು ಅನುಷ್ಠಾನಗೈದ ಸ್ಥಳಗಳು. ಈ ಪ್ರದೇಶಗಳನ್ನು ಪ್ರವಾಸೀ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು.
- ಈ ಸ್ಥಳಗಳಲ್ಲಿ ಶರಣ ಸಂಸ್ಕೃತಿ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಬೇಕು.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications