ತಾಳವಾಡಿಯಲ್ಲಿ ವೀರಪ್ಪನ್ ಸಹಚರನ ಬಂಧನ
ಚಾಮರಾಜನಗರ : ಕರ್ನಾಟಕ ಹಾಗೂ ತಮಿಳುನಾಡು ಪೊಲೀಸರಿಗೆ ಸವಾಲಾಗಿರುವ ನರಹಂತಕ ವೀರಪ್ಪನ್‌ಗೆ ನೆರವು ನೀಡುತ್ತಿದ್ದ ಆರೋಪದ ಮೇಲೆ ತಾಳವಾಡಿಯಲ್ಲಿ ಬಸವೇಗೌಡ ಎಂಬುವವನನ್ನು ವಿಶೇಷ ಕಾರ್ಯಪಡೆ ಪೊಲೀಸರು ಬಂಧಿಸಿದ್ದಾರೆ.
ವೀರಪ್ಪನ್ ಸಹಚರ ಎನ್ನಲಾದ ಬಂಧಿತ ಆರೋಪಿ ಬಸವೇಗೌಡ ನೀಡಿದ ಸುಳಿವಿನ ಹಿನ್ನೆಲೆಯಲ್ಲಿ ತಾಳವಾಡಿ ಪಿರ್ಕಾದ ಹಲವು ಗ್ರಾಮಗಳಲ್ಲಿ ಪೊಲೀಸ್ ಕಾರ್ಯಾಚರಣೆ ತೀವ್ರಗೊಂಡಿದೆ. ಇಗ್ಗಲೂರು, ತಾಳವಾಡಿ, ತಾಳಮಲೈ, ಕೊಂಗಳ್ಳಿ, ಕುಂಬಾರಗುಂಡಿ, ಬೇಡಗುಳಿ ಮತ್ತು ಪುಣಜನೂರುಗಳಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಈ ಕಾರ್ಯಾಚರಣೆ ಸಂದರ್ಭದಲ್ಲಿ ವಿಶೇಷ ಕಾರ್ಯಪಡೆಯ ಪೊಲೀಸರಿಗೆ ಹಲವಾರು ಉಪಯುಕ್ತ ಮಾಹಿತಿಗಳು ಲಭ್ಯವಾಗಿವೆ ಎಂದು ಉನ್ನತ ಪೊಲೀಸ್ ಮೂಲಗಳು ತಿಳಿಸಿವೆ. ಈ ಮಾಹಿತಿಗಳು ವೀರಪ್ಪನ್ ಮತ್ತು ಆತನ ಸಹಚರರ ಬಂಧನಕ್ಕೆ ಸಹಕಾರಿಯಾಗಲಿದೆ ಎಂದೂ ಅದು ಹೇಳಿದೆ.
(ಇನ್‌ಫೋ ವಾರ್ತೆ)
ಮುಖಪುಟ / ವೀರಪ್ಪನ್ ಶಿಕಾರಿ












Click it and Unblock the Notifications