ಮುಸ್ಲಿಂ ಹುಡುಗಿಯಾಂದಿಗೆ ಮುಲಾಯಂ ಮಗನ ಮದುವೆ ಮಾಡ್ತಾರಾ?
ಲಕ್ನೋ : ‘ಮುಸ್ಲಿಂ ಹುಡುಗಿಯಾಂದಿಗೆ ನಿಮ್ಮ ಮಗನ ಮದುವೆ ಮಾಡಿ. ಆಮೇಲೆ ಮಾತನಾಡಿ, ಉಪದೇಶ ಮಾಡಿ.’
ಸಮಾಜವಾದಿ ಪಕ್ಷದ ಕಾರ್ಯಕರ್ತನೊಬ್ಬ ತಮ್ಮ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರನ್ನು ತರಾಟೆಗೆ ತೆಗೆದುಕೊಂಡ ಪರಿಯಿದು. ಮುಲಾಯಂ ಏನು ಹೇಳಿದರೋ ಯಾರಿಗೂ ಸ್ಪಷ್ಟವಾಗಲಿಲ್ಲ . ಏಕೆಂದರೆ, ಸಮಾಜವಾದಿ ಪಕ್ಷದ ಬ್ರಾಹ್ಮಣ ಕಾರ್ಯಕರ್ತರು ಕೂಗಾಡುತ್ತಿದ್ದರು. ಅವರಾರಿಗೂ ಮುಲಾಯಂ ಮಾತುಗಳು ಒಪ್ಪಿಗೆಯಾಗಿರಲಿಲ್ಲ . ಇಷ್ಟಕ್ಕೂ ಮುಲಾಯಂ ಹೇಳಿದ್ದು ಇಷ್ಟೆ-
‘ಪ್ರೇಮಿಸಿ, ಬೇರೆ ಜಾತಿಯವರನ್ನು ಪ್ರೇಮಿಸಿ, ಮದುವೆಯಾಗಿ, ಜಾತಿಯನ್ನು ಚಿಂದಿ ಮಾಡಿ.’
ಜಾತಿ ಕಟ್ಟಲೆಗಳನ್ನೆಲ್ಲ ನಾವು ಮುರಿಯಬೇಕು. ಅದಕ್ಕಾಗಿ ನಮ್ಮ ಯುವ ಜನತೆ ಪ್ರೇಮ ವಿವಾಹ ಮಾಡಿಕೊಳ್ಳಬೇಕು. ಅಂತರ್ಜಾತಿ ವಿವಾಹಗಳಿಂದಲೇ ಜಾತಿಯೆಂಬ ಪೆಡಂಭೂತ ಓಡಿಸಲು ಸಾಧ್ಯ ಎನ್ನುವುದು ಮುಲಾಯಂ ಕಳಕಳಿ. ನಿಮ್ಮ ಹೆಣ್ಣುಮಗಳು ಬೇರೆ ಜಾತಿಯ ಹುಡುಗನನ್ನು ಮದುವೆ ಆಗುತ್ತೇನೆಂದರೆ ಅವಳನ್ನು ಪ್ರೋತ್ಸಾಹಿಸಿ ಎಂದು ಮಕ್ನಾಪುರ್‌ನಲ್ಲಿ ಜರುಗಿದ ಪಕ್ಷದ ರ್ಯಾಲಿಯಲ್ಲಿ ಪೋಷಕರಿಗೆ ಮುಲಾಯಂ ಮನವಿ ಮಾಡಿದರು.
ಮುಲಾಯಂ ಮಾತು ಇನ್ನೂ ಮುಂದುವರಿದಿತ್ತು . ಆದರೆ, ಕೆಲವರು ತಾಳ್ಮೆ ಕಳೆದುಕೊಂಡು ಗಲಭೆ ಎಬ್ಬಿಸಿದರು. ಮುಲಾಯಂ ತಮ್ಮ ಮಾತನ್ನು ಆಚರಣೆಯಲ್ಲಿ ತೋರಿಸಲಿ ಎಂಬುದು ಕಾರ್ಯಕರ್ತರ ಆಗ್ರಹ. ಪಾಪ, ಮುಲಾಯಂ! ಮಾತೇ ಮುತ್ತು , ಮಾತೇ ಮೃತ್ಯು ಅನ್ನುವುದು ಅವರಿಗೇನು ಗೊತ್ತು !?
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications