ಸಮರ ಸನ್ನದ್ಧ ಸ್ಥಿತಿಯಲ್ಲಿ ಭಾರತದ ಕ್ಷಿಪಣಿಗಳು- ಫರ್ನಾಂಡಿಸ್
ನವದೆಹಲಿ: ಭಾರತದ ಮಿಸೈಲ್‌ಗಳು ಸಮರ ಸನ್ನದ್ಧ ಸ್ಥಿತಿಯಲ್ಲಿವೆ ಎಂದು ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.
ಗಡಿ ಭಾಗಗಳಲ್ಲಿ ಭಾರತ ತನ್ನ ಮಿಸೈಲ್‌ಗಳನ್ನು ನಿಯೋಜಿಸುವ ಕುರಿತು ಫರ್ನಾಂಡಿಸ್ ಏನನ್ನೂ ಸ್ಪಷ್ಟವಾಗಿ ಹೇಳದಿದ್ದರೂ, ಪಾಕಿಸ್ತಾನದ ಗಡಿಭಾಗವಾದ ಪಂಜಾಬ್‌ನಲ್ಲಿ ಪೃಥ್ವಿ ನಿರ್ದೇಶಿತ ಮಿಸೈಲ್‌ಗಳನ್ನು ಭಾರತ ನಿಯೋಜಿಸುತ್ತಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
150 ಕಿಮೀ ದೂರದ ಗುರಿಯನ್ನು ತಲುಪಬಲ್ಲ ಪೃಥ್ವಿ ಮಿಸೈಲ್‌ಗಳು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿವೆ ಎಂದು ತಜ್ಞರು ತಿಳಿಸಿದ್ದಾರೆ. 1500 ಕಿಮೀ ಗುರಿಯನ್ನು ತಲುಪಬಲ್ಲ ಅಗ್ನಿ-1 ಮಿಸೈಲ್ ನಿಯೋಜಿಸುವ ಕುರಿತೂ ವರದಿಗಳು ಕೇಳಿಬರುತ್ತಿವೆ. ಪ್ರಸ್ತುತ 2500 ಕಿಮೀ ದೂರವನ್ನು ಗಮಿಸಬಲ್ಲ ಅಗ್ನಿ ಕ್ಷಿಪಣಿಯ ಸುಧಾರಿತ ರೂಪ ಅಗ್ನಿ-2 ರ ತಯಾರಿಕೆಯಲ್ಲಿ ಭಾರತ ತೊಡಗಿದೆ ಎಂದು ಜಾರ್ಜ್ ಫರ್ನಾಂಡಿಸ್ ತಿಳಿಸಿದ್ದಾರೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications