ದಕ್ಷಿಣಕನ್ನಡದಲ್ಲಿ ರಾಜ್ಯಪಾಲೆ: ಗುರುವಾರ ಕನಕ ಮಂಟಪ ಉದ್ಘಾಟನೆ
ಮಂಗಳೂರು: ಸಮಾಜ ಸೇವೆ ಚಟುವಟಿಕೆಗಳಲ್ಲಿ ತೊಡಗಲು ಜನತೆಯನ್ನು ಹುರಿದುಂಬಿಸುವಂತೆ ಭಾರತೀಯ ರೆಡ್‌ಕ್ರಾಸ್ ಸೊಸೈಟಿ (ಐಆರ್‌ಸಿಎಸ್) ಕಾರ್ಯಕರ್ತರಿಗೆ ರಾಜ್ಯಪಾಲೆ ವಿ.ಎಸ್. ರಮಾದೇವಿ ಕರೆ ನೀಡಿದ್ದಾರೆ.
ರೆಡ್‌ಕ್ರಾಸ್ ಸೊಸೈಟಿ ಮಂಗಳೂರಿನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡುತ್ತಿದ್ದ ರಮಾದೇವಿ, ಉತ್ತಮ ಸಮಾಜ ನಿರ್ಮಾಣದಲ್ಲಿ ತೊಡಗಿಕೊಳ್ಳಲು ಯುವ ಜನತೆಯನ್ನು ರೆಡ್‌ಕ್ರಾಸ್ ಸೊಸೈಟಿ ಅಣಿಗೊಳಿಸಬೇಕು ಎಂದರು. ರೆಡ್‌ಕ್ರಾಸ್ ಸೊಸೈಟಿಯ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಪೊಲೀಸ್ ಸಿಬ್ಬಂದಿಯನ್ನು ಅವರು ಶ್ಲಾಘಿಸಿದರು.
ಗುರುವಾರ ಉಡುಪಿಯಲ್ಲಿ ಕನಕ ಮಂಟಪ ಉದ್ಘಾಟನೆ
ಉಡುಪಿಯ ಕೃಷ್ಣ ಮಂಟಪದಲ್ಲಿ ನೂತನವಾಗಿ ನಿರ್ಮಿಸಿರುವ ಕನಕ ಮಂಟಪವನ್ನು ರಾಜ್ಯಪಾಲರು ಗುರುವಾರ ಉದ್ಘಾಟಿಸುವರು. 50 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಮಂಟಪದಲ್ಲಿ ಕನಕಮೂರ್ತಿಯನ್ನು ಪೇಜಾವರ ಪರ್ಯಾಯ ಪೀಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿ ಅನಾವರಣಗೊಳಿಸುವರು.
ಇದೇ ಸಂದರ್ಭದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಅನಂತಕುಮಾರ್ ರಾಷ್ಟ್ರೀಯ ಕನಕ ಜಯಂತಿ ಮಹೋತ್ಸವಕ್ಕೆ ಚಾಲನೆ ನೀಡುವರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications