ಗಡಿ ಪ್ರದೇಶಕ್ಕೆ ಸೇನೆ : ಜ.15 ರ ಆರ್ಮಿ ಡೇ ಪೆರೇಡ್ ರದ್ದು
ನವದೆಹಲಿ : ಭಾರತ ಹಾಗೂ ಪಾಕಿಸ್ತಾನ ನಡುವೆ ಸಂಭವನೀಯ ಯುದ್ಧದ ಹಿನ್ನೆಲೆಯಲ್ಲಿ ಜನವರಿ 15 ರಂದು ನಿಯೋಜಿತವಾಗಿದ್ದ ಆರ್ಮಿ ಡೇ ಪೆರೇಡ್ ರದ್ದಾಗಿದೆ.
ಗಡಿ ಭಾಗಗಳಲ್ಲಿ ಪಾಕಿಸ್ತಾನ ಹೆಚ್ಚಿನ ಸೈನ್ಯವನ್ನು ನಿಯೋಜಿಸುತ್ತಿರುವುದಕ್ಕೆ ಪ್ರತಿಯಾಗಿ ಭಾರತ ಕೂಡ ಗಡಿ ಭಾಗಗಳಿಗೆ ತನ್ನ ಹೆಚ್ಚಿನ ಪಡೆಗಳನ್ನು ರವಾನಿಸಿದೆ. ಇದರಿಂದಾಗಿ ಜನವರಿ 15 ರ ಆರ್ಮಿ ಡೇ ಪೆರೇಡ್ ನಡೆಯುವುದಿಲ್ಲ ಎಂದು ರಕ್ಷಣಾ ಪಡೆಗಳ ವಕ್ತಾರರೊಬ್ಬರು ಬುಧವಾರ ತಿಳಿಸಿದ್ದಾರೆ.
ಈ ನಡುವೆ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿ ಮುಂದುವರೆದಿದ್ದು , ಪಾಕ್ ದಾಳಿಗೆ ಉತ್ತರವಾಗಿ ಭಾರತದ ಯೋಧರು ನಡೆಸಿದ ಷೆಲ್ ದಾಳಿಗೆ 25 ಪಾಕ್ ಯೋಧರು ಬಲಿಯಾಗಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲೂ ಉದ್ವಿಗ್ನ ಪರಿಸ್ಥಿತಿ ಮುಂದುವರಿದಿದೆ.
ರಾಜ ತಾಂತ್ರಿಕ ವ್ಯೂಹ : ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಸಮರವನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ಕೇಂದ್ರ ಸಚಿವ ಸಂಪುಟದ ರಕ್ಷಣಾ ಸಮಿತಿ ಬುಧವಾರ ಸಭೆ ಸೇರಿ ಚರ್ಚಿಸಲಿದೆ. ಪಾಕ್ ವಿರುದ್ಧ ಸರ್ಕಾರ ಕೈಗೊಳ್ಳುವ ಕಠಿಣ ನಿಲುವುಗಳ ಕುರಿತು ಪ್ರಧಾನಿ ವಾಜಪೇಯಿ ಸಭೆಯಲ್ಲಿ ವಿವರಗಳನ್ನು ನೀಡುವರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications