ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಡುಗಳ್ಳ ವೀರಪ್ಪನ್‌ ಬಂಧನಕ್ಕೆ ಬಹು ಆಯಾಮದ ಕಾರ್ಯತಂತ್ರ

By Staff
|
Google Oneindia Kannada News

ಕೊಯಮತ್ತೂರು : ಕರ್ನಾಟಕ ಹಾಗೂ ತಮಿಳುನಾಡು ಹಿತದೃಷ್ಟಿಯಿಂದ ಕಾಡುಗಳ್ಳ - ನರಹಂತಕ ವೀರಪ್ಪನ್‌ನನ್ನು ಆದಷ್ಟು ಬೇಗ ಸೆರೆಹಿಡಿಯಲಾಗುವುದು ಎಂದು ವಿಶೇಷ ಕಾರ್ಯಪಡೆಯ ಎಡಿಜಿಪಿ ಆರ್‌. ನಟರಾಜ್‌ ಇಲ್ಲಿ ಪ್ರಕಟಿಸಿದ್ದಾರೆ.

ಈಗ ದಂತಚೋರನನ್ನು ಸೆರೆಹಿಡಿಯಲು ಬಹುಮುಖೀ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. ಇನ್ನುಮುಂದೆ ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆ ಬಿಡಿ ಬಿಡಿಯಾಗಿರದೆ ಸಮಗ್ರವಾಗಿರುತ್ತದೆ. ಈಗಾಗಲೇ ವೀರಪ್ಪನ್‌ನ ಅಡಗುತಾಣಗಳೆಂದು ಪರಿಗಣಿಸಲಾಗಿರುವ ಕೆಲವು ಸ್ಥಳಗಳನ್ನು ಎಸ್‌ಟಿಎಫ್‌ ಗುರುತಿಸಿದೆ. ಆಯಕಟ್ಟಿನ ಸ್ಥಳಗಳನ್ನು ಬೇಧಿಸಿರುವ ಎಸ್‌ಟಿಎಫ್‌, ಆ ನೆಲೆಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನೂ ಸಾಧಿಸಿದೆ ಎಂದು ನಟರಾಜ್‌ ಹೇಳಿದರು.

ಬಿಎಸ್‌ಎಫ್‌ ಹಿಂತೆಗೆತೆದ ಬಳಿಕ ವೀರಪ್ಪನ್‌ ಕಾರ್ಯಾಚರಣೆಗೆ ಹಿನ್ನಡೆಯುಂಟಾಗಿಯೇ ಎಂದು ಪತ್ರಕರ್ತರು ಕೇಳಿದಾಗ, ಎಸ್‌ಟಿಎಫ್‌ ಉತ್ಸಾಹದಿಂದ ಕಾರ್ಯನಿರತವಾಗಿದೆ ಎಂದರು. ವೀರಪ್ಪನ್‌ ಬಂಧನಕ್ಕೆ ಕಾಲಮಿತಿ ಹಾಕಿಕೊಳ್ಳಲಾಗಿದೆಯೇ ಎಂಬ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ನಟರಾಜ್‌, ಉಭಯ ರಾಜ್ಯಗಳ ಹಿತದೃಷ್ಟಿಯಿಂದ ಕಾಡುಗಳ್ಳನನ್ನು ಅತಿ ಶೀಘ್ರವೇ ಎಸ್‌ಟಿಎಫ್‌ ಸೆರೆಹಿಡಿಯಲಿದೆ ಎಂದಷ್ಟೇ ಹೇಳಿದರು.

(ಏಜೆನ್ಸೀಸ್‌)

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X