ರೋಗಗ್ರಸ್ತ ಜವಳಿ ಗಿರಣಿ ಪುನರುಜ್ಜೀವನಕ್ಕೆ 2993 ಕೋಟಿ ರು.
ಮಂಗಳೂರು: ರಾಷ್ಟ್ರೀಯ ಜವಳಿ ನಿಗಮ (ಎನ್‌ಟಿಸಿ)ದಡಿ ರೋಗಗ್ರಸ್ತ ಜವಳಿ ಗಿರಣಿಗಳನ್ನು ಪುನರುಜ್ಜೀವನಗೊಳಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಕೇಂದ್ರ ಜವಳಿ ಖಾತೆ ಸಚಿವ ವಿ.ಧನಂಜಯ ಕುಮಾರ್ ತಿಳಿಸಿದ್ದಾರೆ.
ರಾಷ್ಟ್ರೀಯ ಜವಳಿ ನಿಗಮದ 60 ಗಿರಣಿಗಳನ್ನು ಮುಚ್ಚಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನೂ ಸಾಮರ್ಥ್ಯ ಉಳಿಸಿಕೊಂಡಿರುವ 44 ಗಿರಣಿಗಳನ್ನು 2993 ಕೋಟಿ ರುಪಾಯಿ ಯೋಜನೆಯಲ್ಲಿ ಪುನರುಜ್ಜೀವನಗೊಳಿಸಲಾಗುವುದು ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಧನಂಜಯ ಕುಮಾರ್ ತಿಳಿಸಿದರು.
ಯೋಜನೆಯಲ್ಲಿ 1291 ಕೋಟಿ ರುಪಾಯಿಗಳನ್ನು ಗಿರಣಿಗಳ ಆಧುನೀಕರಣಕ್ಕೆ ಬಳಸಲಾಗುವುದು. ಉಳಿದ 1030 ಕೋಟಿ ರುಪಾಯಿಗಳನ್ನು ಸ್ವಯಂ ನಿವೃತ್ತ ಯೋಜನೆ (ವಿಆರ್‌ಎಸ್)ಗೆ ಬಳಸಲಾಗುವುದು. ಯೋಜನೆಯನ್ನು ಬಿಐಎಫ್‌ಆರ್ ಅನುಮೋದಿಸಿದ ನಂತರ ಶೀಘ್ರದಲ್ಲೇ ರೋಗಗ್ರಸ್ತ ಗಿರಣಿಗಳ ಪುನರುಜ್ಜೀವನ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಧನಂಜಯ ಕುಮಾರ್ ಹೇಳಿದರು.(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications