ಮಂತ್ರಿ ಮಾಡ್ತೀನಿ ಎಂದು ವಸಂತ ಸಾಲಿಯಾನಗೆ ಕೃಷ್ಣ ಹೇಳಿದಾರಂತೆ!

ಉಡುಪಿ : 2002 ನೇ ಇಸವಿ ಜನವರಿಯ ಮೊದಲ ವಾರದಲ್ಲಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ತಮ್ಮ ಸಚಿವ ಸಂಪುಟ ವಿಸ್ತರಿಸುವ ನಿರೀಕ್ಷೆಯಿದ್ದು - ಈ ವಿಸ್ತರಣೆಯಲ್ಲಿ ತಮಗೆ ಸಚಿವ ಸ್ಥಾನ ದೊರೆಯುವ ಬಗ್ಗೆ ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಸಚಿವ ವಸಂತ ವಿ. ಸಾಲಿಯಾನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂತ್ರಿ ಮಂಡಲದಲ್ಲಿ ಸ್ಥಾನ ನೀಡುವುದಾಗಿ ನನಗೆ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಭರವಸೆ ನೀಡಿದ್ದಾರೆ. ಮುಂದಿನ ಬಾರಿಯ ಸಂಪುಟ ವಿಸ್ತರಣೆಯಲ್ಲಿ ನನಗೆ ಸ್ಥಾನ ಖಾಯಂ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಸಂತ ಸಾಲಿಯಾನ ವಿಶ್ವಾಸ ವ್ಯಕ್ತಪಡಿಸಿದರು.

ಉಡುಪಿ ಜಿಲ್ಲೆಯ ಇತರ ಶಾಸಕರು ತಾವು ಸಚಿವರಾಗುವುದಕ್ಕೆ ತೊಡಕಾಗಬಹುದಾದ ಸಾಧ್ಯತೆಗಳನ್ನು ಸಾಲಿಯಾನ

ತಳ್ಳಿಹಾಕಿದರು. ಮಂತ್ರಿ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಅಲ್ಲದೆ ಧರ್ಮಸಿಂಗ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಹೊರತುಪಡಿಸಿದರೆ ಐದು ಬಾರಿ ಶಾಸಕನಾಗಿ ಆರಿಸಿಬಂದ ಹೆಗ್ಗಳಿಕೆ ನನ್ನದು. ಆದ್ದರಿಂದ ನಾನು ಸಚಿವನಾಗೋದು ಗ್ಯಾರಂಟಿ ಎಂದು ವಸಂತ ಸಾಲಿಯಾನ ವಿಶ್ವಾಸ ವ್ಯಕ್ತಪಡಿಸಿದರು. ಅಂದಹಾಗೆ, ಪಕ್ಷದ ವರಿಷ್ಠರು ಕೂಡ ಸಾಲಿಯಾನ ಅವರಿಗೆ ಸಚಿವ ಸ್ಥಾನ ನೀಡುವಂತೆ ಶಿಫಾರಸ್ಸು ಮಾಡಿದ್ದಾರಂತೆ!

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+