ಸಚಿವ ಧನಂಜಯಕುಮಾರ್‌ರನ್ನು ಕೊಲ್ಲುವ ಬೆದರಿಕೆ : ಬಿಗಿ ಭದ್ರತೆ
ಮಂಗಳೂರು : ಕೇಂದ್ರ ಜವಳಿ ಖಾತೆ ಸಹಾಯಕ ಸಚಿವ ಬಿ. ಧನಂಜಯ ಕುಮಾರ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಕರೆಗಳು ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಬಿಗಿ ಭದ್ರತೆ ನೀಡಲಾಗಿದೆ. ಈ ವಿಷಯವನ್ನು ಸ್ವತಃ ಧನಂಜಯಕುಮಾರ್ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಸೋಮವಾರ ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಅವರು, ಮಂಗಳೂರು ಪೊಲೀಸರಿಗೆ ಈ ಸಂಬಂಧ ಹಲವಾರು ಬೆದರಿಕೆ ಕರೆಗಳು ಬಂದಿವೆ ಎಂದರು. ಮೈಸೂರಿನಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಅಲ್ಲಿಗೆ ತೆರಳಿದ್ದಾಗ, ತಾವು ಈ ವಿಷಯವನ್ನು ಮೈಸೂರು ಪೊಲೀಸರ ಗಮನಕ್ಕೂ ತಂದಿದ್ದಾಗಿ ಸಚಿವರು ಹೇಳಿದರು.
ಭಾನುವಾರ ಬೆಳಗ್ಗೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ಬಂದ ಅನಾಮಧೇಯ ಕರೆಯಾಂದು ಮುಂಬಯಿಯಿಂದ ಹೊರಟಿರುವ ಮೂವರು ಶಾರ್ಪ್ ಷೂಟರ್‌ಗಳು ಧನಂಜಯಕುಮಾರ್ ಅವರತ್ತ ಗುರಿ ಇಟ್ಟಿದ್ದಾರೆ ಎಂದು ತಿಳಿಸಿತ್ತು. ಕಂಟ್ರೋಲ್‌ರೂಂಗೆ ಬಂದ ಮತ್ತೊಂದು ಕರೆಯೂ ಇದೇ ವಿಷಯವನ್ನು ಪುನರುಚ್ಚರಿಸಿತ್ತು. ಈ ಹಿನ್ನೆಲೆಯಲ್ಲಿ ಸಚಿವರಿಗೆ ರಕ್ಷಣೆ ನೀಡಲಾಗಿದೆ.
ಈ ಮಧ್ಯೆ ದೂರವಾಣಿ ಕರೆಗಳ ಸತ್ಯಾಸತ್ಯತೆಯನ್ನು ಅರಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿಸಿರುವ ಧನಂಜಯಕುಮಾರ್ ತಾವು ಇಂತಹ ಬೆದರಿಕೆಗಳಿಗೆಲ್ಲಾ ಬಗ್ಗುವುದಿಲ್ಲ ಎಂದು ಹೇಳಿದ್ದಾರೆ.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications