ಬೆಂಗಳೂರಿನ ಬನ್ನೇರಘಟ್ಟದಲ್ಲಿ ಅರಳಲಿದೆ ಪತಂಗ ಪರಪಂಚ
ಮೈಸೂರು : ಚಿಟ್ಟೆಗಳ ಪಾರ್ಕೊಂದನ್ನು ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಸ್ಥಾಪಿಸುವ ಯೋಜನೆ ಚುರುಕಾಗಿದೆ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕ ಝೂ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ.ಎನ್. ಸಹಾಯ್ ಹೇಳಿದ್ದಾರೆ.
3.62 ಕೋಟಿ ರುಪಾಯಿ ಅಂದಾಜು ವೆಚ್ಚದ ಈ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆ ಒಲವು ತೋರಿದೆ. ಹೆಬ್ಬಾಳದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯ, ಕರ್ನಾಟಕ ಝೂ ಪ್ರಾಧಿಕಾರ ಹಾಗೂ ಸರ್ಕಾರೇತರ ಸಂಸ್ಥೆ ಎಟಿಆರ್‌ಇ ಕೂಡ ಈ ಯೋಜನೆಯಲ್ಲಿ ತೊಡಗಿಕೊಳ್ಳಲು ತುದಿಗಾಲಲ್ಲಿ ನಿಂತಿವೆ. 12 ಎಕರೆ ವಿಶಾಲ ಜಾಗೆಯಲ್ಲಿ ಚಿಟ್ಟೆಗಳ ಉದ್ಯಾನ ತಲೆಯೆತ್ತಲಿದ್ದು, ಇದರಲ್ಲಿ ಚಿಟ್ಟೆಗಳಷ್ಟೇ ಅಲ್ಲದೆ ಇನ್ನೂ ಕೆಲವು ಪ್ರಭೇದದ ಕಚ್ಚದ ಕೀಟಗಳನ್ನು ಹಾರಲು ಬಿಡುವ ಯೋಚನೆಯಿದೆ ಎಂದು ಸಹಾಯ್ ತಿಳಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications