ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನಸಿಕ ಅಸ್ವಾಸ್ತ್ಯಕ್ಕೆ ಆಯುರ್ವೇದ ಚಿಕಿತ್ಸೆ :ಅಂ.ರಾ. ಸಮ್ಮೇಳನ

By Staff
|
Google Oneindia Kannada News

ಮಣಿಪಾಲ್‌ : ಮಾನಸಿಕ ಅಸ್ವಾಸ್ತ್ಯಕ್ಕೆ ಆಯುರ್ವೇದ ಪರಿಭಾಷ್ಯ ಹಾಗೂ ಚಿಕಿತ್ಸೆ ಕುರಿತಂತೆ ಅಂತಾರಾಷ್ಟ್ರೀಯ ಸಮ್ಮೇಳನ ಜನವರಿ 10ರಿಂದ ಮೂರು ದಿನಗಳ ಕಾಲ ಮಣಿಪಾಲ್‌ನಲ್ಲಿ ನಡೆಯಲಿದೆ. ಈ ವಿಷಯವನ್ನು ವ್ಯವಸ್ಥಾಪಕ ಸಮಿತಿ ಮುಖ್ಯಸ್ಥ ಡಾ. ಯು.ಎನ್‌. ಪ್ರಸಾದ್‌ ಮಾಧ್ಯಮ ಪ್ರತಿನಿಧಿಗಳಿಗೆ ಇಲ್ಲಿ ತಿಳಿಸಿದ್ದಾರೆ.

ಈ ಆಯುರ್ವೇದ ಕಾಂಗ್ರೆಸ್‌ ಸಮಾವೇಶವನ್ನು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸಾ ವಿಭಾಗ ಹಾಗೂ ಉಡುಪಿಯ ಆಸ್ಪತ್ರೆಗಳ ಸಹಯೋಗದಲ್ಲಿ ನಡೆಸಲಾಗುತ್ತಿದೆ. ಈ ಸಮ್ಮೇಳನ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.

ಮಾನಸಿಕ ಅಸ್ವಾಸ್ತ್ಯಕ್ಕೆ ಸಂಬಂಧಿಸಿದಂತೆ ‘ವಾತ ವ್ಯಾಧಿ’ಗಳ ಬಗ್ಗೆ ಆಯುರ್ವೇದ ಪಂಡಿತರಿಗೆ ಹೆಚ್ಚಿನ ಅರಿವು ದೊರಕಿಸಿಕೊಡುವ ಸಲುವಾಗಿ ಈ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮಾವೇಶದಲ್ಲಿ ದೇಶ ವಿದೇಶಗಳ ತಜ್ಞರು - ಪಂಡಿತರು ಪಾಲ್ಗೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ಅಮೆರಿಕ, ಜರ್ಮನಿ, ಮಯನ್‌ಮಾರ್‌, ಶ್ರೀಲಂಕಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಿಂದ ತಜ್ಞರು ಹಾಗೂ ಸಂಸ್ಥೆಗಳ ಪ್ರತಿನಿಧಿಗಳು ಈ ಸಮಾವೇಶಕ್ಕೆ ಆಗಮಿಸುತ್ತಿದ್ದಾರೆ. 10 ಮಂದಿ ತಜ್ಞರು ಮತ್ತು 150ಕ್ಕೂ ಹೆಚ್ಚು ಪಂಡಿತರು ನರದೌರ್ಬಲ್ಯದ ವಿವಿಧ ಸ್ಥರಗಳ ಬಗ್ಗೆ ತಮ್ಮ ಪ್ರಬಂಧಗಳನ್ನು ಮಂಡಿಸಲಿದ್ದಾರೆ. ಈ ಸಮಾವೇಶಕ್ಕೆ ವಿಶ್ವದ ನಾನಾ ಭಾಗಗಳಿಂದ ಸುಮಾರು 1500 ಪ್ರತಿನಿಧಿಗಳು ಆಗಮಿಸುತ್ತಿದ್ದಾರೆ ಎಂದೂ ಪ್ರಸಾದ್‌ ಹೇಳಿದರು.

(ಪಿ.ಟಿ.ಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X