ಕಾರ್ಕಳ ಭಗವಾನ್ ಬಾಹುಬಲಿ ಮಜ್ಜನಕ್ಕೆಎಸ್.ಎಂ. ಕೃಷ್ಣ ಸಾಕ್ಷಿ
ಕಾರ್ಕಳ: ಇಲ್ಲಿನ ಭಗವಾನ್ ಬಾಹುಬಲಿ ಮೂರ್ತಿಗೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕ ಉತ್ಸವದಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಭಾಗವಹಿಸುವರು ಎಂದು ಮಹಾ ಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷ ಎಸ್.ಡಿ. ಸಾಮ್ರಾಜ್ಯ ತಿಳಿಸಿದ್ದಾರೆ.
ಮಹಾ ಮಸ್ತಕಾಭಿಷೇಕದ ಆರಂಭದ ದಿನವಾದ ಫೆ. 16 ರಂದು ಕಾರ್ಕಳಕ್ಕೆ ಆಗಮಿಸುವ ಎಸ್.ಎಂ. ಕೃಷ್ಣ ಉತ್ಸವದ ಅಂಗವಾಗಿ ಏರ್ಪಡಿಸಿರುವ ಸಾಂಸ್ಕೃತಿಕ ಸಮಾರಂಭವನ್ನು ಉದ್ಘಾಟಿಸುವರು.
ಮಹಾ ಮಸ್ತಕಾಭಿಷಕ ಸಮಿತಿಯ ಗೌರವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಆಯ್ಕೆಯಾಗಿದ್ದು , ಅವರು ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಮಾರಂಭದ ಅಧ್ಯಕ್ಷತೆಯನ್ನೂ ವಹಿಸುವರೆಂದು ಸಾಮ್ರಾಜ್ಯ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications