ಬಸವನ ಬಾಗೇವಾಡಿ ಬಳಿ ರಸ್ತೆ ಅಪಘಾತ : ನಾಲ್ವರ ಸಾವು
ಬಿಜಾಪುರ : ಬಸವನ ಬಾಗೇವಾಡಿಯ ಮುತ್ತಗಿ ಕ್ರಾಸ್ ಬಳಿ ಕಾರು ಹಾಗೂ ಲಾರಿ ನಡುವೆ ಮಂಗಳವಾರ ರಾತ್ರಿ ಸಂಭವಿಸಿದ ಅಪಘಾತದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಮೃತ ಪಟ್ಟಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬಿಜಾಪುರ ಕಡೆಗೆ ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆಯಿತು. ಕಾರಿನಲ್ಲಿದ್ದ ಬಿಜಾಪುರದ ದಾನಮ್ಮ (35) ಹಾಗೂ ಮಗು ರೇಷ್ಮಾ ಜಾಧವ (2) ಸ್ಥಳದಲ್ಲೇ ಮೃತರಾದರು. ತೀವ್ರವಾಗಿ ಗಾಯಗೊಂಡಿದ್ದ ಮಹಾಂತೇಶ ಲಮಾಣಿ (35) ಹಾಗೂ ಮಹಾದೇವ ಮಾಶ್ಯಾಳ (40) ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಬಸವನ ಬಾಗೇವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications