ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಆನ್‌ಲೈನ್‌ ಸೌಲಭ್ಯ ಬಳಸಿ, ಪಾಸ್‌ಪೋರ್ಟ್‌ ಬೇಗ ಗಳಿಸಿ’

By Staff
|
Google Oneindia Kannada News

ಬೆಂಗಳೂರು : ಅರ್ಜಿ ಸಲ್ಲಿಸಿದ 15ರಿಂದ 40 ದಿನಗಳ ಒಳಗಾಗಿ ಪಾಸ್‌ಪೋರ್ಟ್‌ ವಿತರಿಸಬೇಕು ಎಂದು ನಿಯಮ ಹೇಳುತ್ತದೆ. ಆದರೆ, ಕರ್ನಾಟಕ ಪಾಸ್‌ಪೋರ್ಟ್‌ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಿದ 40 ದಿನದಿಂದ 60 ದಿನಗಳ ಒಳಗೆ ಪಾಸ್‌ಪೋರ್ಟ್‌ ನೀಡಲಾಗುತ್ತಿದೆ.

ನಿಯಮಗಳ ರೀತ್ಯ ಆದಷ್ಟು ಬೇಗ ಪಾಸ್‌ಪೋರ್ಟ್‌ ವಿತರಿಸಬೇಕು ಎಂಬ ಉದ್ದೇಶ ಕರ್ನಾಟಕ ವಲಯಕ್ಕೂ ಇದೆ. ಆದರೆ, ಸಿಬ್ಬಂದಿಯ ಕೊರತೆಯಿಂದ ಇದು ಸಾಧ್ಯವಾಗುತ್ತಿಲ್ಲ. ಈ ವಿಷಯವನ್ನು ಕರ್ನಾಟಕ ವಲಯ ಪಾಸ್‌ಪೋರ್ಟ್‌ ಅಧಿಕಾರಿ ಸೌಮನ್‌ ಭಗಚಿ ಅವರೇ ತಿಳಿಸಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಒಕ್ಕೂಟ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ತಮ್ಮ ಈ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ನಿಯಮ ಕಾಪಾಡಲು ನಾವು ತರಾತುರಿಯಲ್ಲಿ ಅರ್ಜಿಗಳನ್ನು ವಿಲೇ ಮಾಡಲು ಸಾಧ್ಯವೇ ಇಲ್ಲ. ಇದರಿಂದ ಮುಂದೆ ಭಾರಿ ತೊಂದರೆಯನ್ನೇ ಎದುರಿಸಬೇಕಾಗುತ್ತದೆ. ಆದ್ದರಿಂದ ಇರುವ ಸಿಬ್ಬಂದಿಯನ್ನೇ ಸಮರ್ಪಕವಾಗಿ ಬಳಸಿಕೊಂಡು ಸಾಧ್ಯವಾದಷ್ಟು ಬೇಗ ಪಾಸ್‌ಪೋರ್ಟ್‌ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.

2002ರ ಫೆಬ್ರವರಿಯಿಂದ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ 40 ದಿನಗಳ ಒಳಗಾಗಿ ಪಾಸ್‌ಪೋರ್ಟ್‌ ನೀಡಿಕೆಗೆ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನಲ್ಲಿರುವ ಪ್ರವಾಸಿ ಸಂಸ್ಥೆಗಳ ಮೂಲಕ ಪ್ರತಿ ಬುಧವಾರ ಪಾಸ್‌ಪೋರ್ಟ್‌ ವಿತರಿಸುವ ಬಗ್ಗೆ ಕೂಡ ಚಿಂತಿಸಲಾಗುತ್ತಿದೆ ಎಂದು ಭಗಚಿ ತಿಳಿಸಿದರು.

ಆನ್‌ಲೈನ್‌ ಅರ್ಜಿಗೆ ಬೇಡಿಕೆಯೇ ಇಲ್ಲ: ಸಾರ್ವಜನಿಕರ ಅನುಕೂಲಕ್ಕಾಗಿ ಆನ್‌ಲೈನ್‌ (ಇಂಟರ್‌ನೆಟ್‌)ನಲ್ಲಿ ಪಾಸ್‌ಪೋರ್ಟ್‌ ಅರ್ಜಿ ಲಭ್ಯವಾಗುವಂತೆ ಮಾಡಲಾಗಿದೆ. ಆದರೆ, ಈ ಸೌಲಭ್ಯದ ಸಮರ್ಪಕ ಬಳಕೆ ಆಗುತ್ತಿಲ್ಲ. ಅರ್ಜಿದಾರರು ಆನ್‌ಲೈನ್‌ ಸೌಲಭ್ಯ ಬಳಸಿಕೊಳ್ಳುವ ಮೂಲಕ ಶೀಘ್ರವಾಗಿ ಪಾಸ್‌ಪೋರ್ಟ್‌ ಪಡೆಯಬಹುದು. ಈ ವ್ಯವಸ್ಥೆ ಅರ್ಜಿಯ ಶೀಘ್ರ ವಿಲೇವಾರಿಗೆ ಸಹಕಾರಿಯಾಗಿದೆ ಎಂದು ಅವರು ಹೇಳಿದರು.

ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದವರ, ಸಲ್ಲಿಸುವವರ ಸಮಸ್ಯೆಗಳನ್ನು ಪರಿಹರಿಸಲೆಂದೇ ಪ್ರತಿದಿನ ಬೆಳಗ್ಗೆ 10ರಿಂದ ಮಧ್ಯಾಹ್ನ 12ಗಂಟೆ ವರೆಗೆ ಕಚೇರಿಯಲ್ಲಿ ಅಧಿಕಾರಿಗಳು ಮಾರ್ಗದರ್ಶನ ಮಾಡುತ್ತಾರೆ. ಅರ್ಜಿದಾರರಿಗೆ ಯಾವುದೇ ರೀತಿಯ ಸಮಸ್ಯೆ ಇದ್ದರೂ ಅಧಿಕಾರಿಗಳನ್ನು ಭೇಟಿಯಾಗಬೇಕೇ ಹೊರತು ಮಧ್ಯವರ್ತಿಗಳನ್ನಲ್ಲ ಎಂದು ಅವರು ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಸಂಸ್ಥೆಯ ಅಧ್ಯಕ್ಷ ಎಂ. ಸತ್ಯನಾರಾಯಣ ಸ್ವಾಮಿ, ಉಪಾಧ್ಯಕ್ಷರಾದ ಕೆ.ಎನ್‌. ಜಯಲಿಂಗಪ್ಪ, ಪೆರಿಕಲ್‌ ಎಂ. ಸುಂದರ್‌ ಮೊದಲಾದವರು ಹಾಜರಿದ್ದರು.

(ಇನ್‌ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X