ರೋಗಗ್ರಸ್ತ ಮನಸ್ಸುಗಳಿಂದ ಭಯೋತ್ಪಾದಕತೆ- ಧನಂಜಯಕುಮಾರ್
ಮಂಗಳೂರು: ಡಿಸೆಂಬರ್ 13 ರಂದು ಪಾರ್ಲಿಮೆಂಟ್ ಭವನದ ಮೇಲೆ ನಡೆದ ದಾಳಿ ರೋಗಗ್ರಸ್ತ ಮನಸ್ಸುಗಳ ಕೃತ್ಯವೆಂದು ಕೇಂದ್ರ ಜವಳಿ ಖಾತೆ ರಾಜ ಸಚಿವ ವಿ. ಧನಂಜಯಕುಮಾರ್ ಬಣ್ಣಿಸಿದ್ದಾರೆ.
ರಕ್ಷಣಾ ಸಿಬ್ಬಂದಿಯ ಕಾರ್ಯಕ್ಷಮತೆಯಿಂದಾಗಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿತು. ಭಯೋತ್ಪಾದಕತೆ ಗರಿಬಿಚ್ಚಿ ಮುಖಾಮುಖಿಯಾಗಿರುವ ಸಂದರ್ಭದಲ್ಲಿ ಇಡೀ ರಾಷ್ಟ್ರ ಒಗ್ಗಟ್ಟು ಪ್ರದರ್ಶಿಸಿ, ಭಯೋತ್ಪಾದಕತೆ ವಿರುದ್ಧ ತೊಡೆ ತಟ್ಟಿನಿಲ್ಲಬೇಕಾಗಿದೆ ಎಂದು ಭಾನುವಾರ ಪಿಟಿಐನೊಂದಿಗೆ ಮಾತನಾಡಿದ ಧನಂಜಯಕುಮಾರ್ ಹೇಳಿದ್ದಾರೆ.
ಪುನರಾವರ್ತನೆಯಾಗುತ್ತಿರುವ ಭಯೋತ್ಪಾದಕ ಕೃತ್ಯಗಳನ್ನು ನಿಯಂತ್ರಿಸಲು ಕಠಿಣ ಹಾಗೂ ಸಮರ್ಥ ಕಾನೂನಿನ ಅವಶ್ಯಕತೆಯಿದೆ. ಆದರೆ, ಇಂಥ ಕಾನೂನು ಜಾರಿಗೆ ಕೆಲವು ರಾಜಕೀಯ ಬಣಗಳು ವಿರೋಧ ವ್ಯಕ್ತಪಡಿಸುತ್ತಿರುವುದು ವಿಪರ್ಯಾಸ ಎಂದು ಪೊಟೊ ಹೆಸರು ಹೇಳದೆ ಧನಂಜಯಕುಮಾರ್ ನುಡಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications