ಮನುಕುಲಕ್ಕೆ ಪ್ರವಾದಿ ಮೊಹಮದ್ ಬೋಧನೆ ದಾರಿದೀಪವಾಗಲಿ
ಬೆಂಗಳೂರು: ರಾಜ್ಯಪಾಲೆ ವಿ.ಎಸ್. ರಮಾದೇವಿ ಹಾಗೂ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಈದ್-ಉಲ್- ಫಿತರ್ ಆಚರಣೆಯ ಸಂಭ್ರಮದಲ್ಲಿ ರಾಜ್ಯದ ಮುಸಲ್ಮಾನ ಬಾಂಧವರಿಗೆ ಶುಭಾಶಯ ಕೋರಿದ್ದಾರೆ.
ಪವಿತ್ರ ಗ್ರಂಥ ಕುರಾನ್ ಸಾರುವ ಸಾರ್ವತ್ರಿಕ ಸಹಿಷ್ಣುತೆ ಹಾಗೂ ಸರ್ವಧರ್ಮ ಸಹಭಾವ ಸಂದೇಶವನ್ನು ಪ್ರತಿಯಾಬ್ಬರೂ ತಂತಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತರಬೇಕಾಗಿದೆ ಎಂದು ತಮ್ಮ ರಂಜಾನ್ ಶುಭಾಶಯ ಸಂದೇಶದಲ್ಲಿ ರಾಜ್ಯಪಾಲೆ ರಮಾದೇವಿ ತಿಳಿಸಿದ್ದಾರೆ. ಪ್ರವಾದಿ ಮೊಹಮದ್ ಅವರು ಬೋಧಿಸಿದ ಪ್ರೀತಿ, ಕ್ಷಮೆ, ಕರುಣೆ, ಸ್ನೇಹಭಾವ ಹಾಗೂ ಸಮಾನತೆಗಳು ಸಂಕಷ್ಟದಲ್ಲಿ ಸಿಲುಕಿರುವ ಮನುಕುಲಕ್ಕೆ ದಾರಿದೀಪವಾಗಿವೆ ಎಂದು ರಮಾದೇವಿ ಅಭಿಪ್ರಾಯಪಟ್ಟಿದ್ದಾರೆ.
ರಂಜಾನ್ ಹಬ್ಬವು ಸಮಾನತೆ, ಪರಿಶುದ್ಧತೆ ಹಾಗೂ ಪವಿತ್ರತೆಯ ಸಂಕೇತವಾಗಿದೆ ಎಂದು ಬಣ್ಣಿಸಿರುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಶಾಂತಿಗಾಗಿ ದುಡಿಯಲು ಸಮಾಜದ ಎಲ್ಲ ವರ್ಗಗಳಿಗೆ ರಂಜಾನ್ ಪ್ರೇರಕವಾಗಿರುತ್ತದೆನ್ನುವ ಆಶಾಭಾವನೆಯನ್ನು ತಮ್ಮ ಸಂದೇಶದಲ್ಲಿ ವ್ಯಕ್ತಪಡಿಸಿದ್ದಾರೆ.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications