ಅಡಿಕೆಬೆಳೆಗಾರರ ರ್ಯಾಲಿಯಲ್ಲಿ ಯಡಿಯೂರಪ್ಪ ತೋರಿದ ರೈತ ಕಾಳಜಿ
ಮಂಗಳೂರು: ಅಡಿಕೆಗೆ ಬೆಂಬಲ ಬೆಲೆ ಹಾಗೂ ತೆರಿಗೆ ವಿನಾಯಿತಿ ನೀಡುವಂತೆ ಸರಕಾರವನ್ನು ಆಗ್ರಹಿಸಿ ಸುಳ್ಯದಿಂದ ಬಿಜೆಪಿ ನೇತೃತ್ವದಲ್ಲಿ ಶುಕ್ರವಾರ ಹೊರಟಿದ್ದ ಅಡಿಕೆ ಬೆಳೆಗಾರರ ರ್ಯಾಲಿ ಶನಿವಾರ ಸಂಜೆ ಮಂಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯಾಂದಿಗೆ ಅಂತ್ಯಗೊಂಡಿತು.
ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದ ಸಭೆಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ನಾಯಕ ಬಿ. ಎಸ್. ಯಡಿಯೂರಪ್ಪ ರೈತರ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಅವರ ಭಾಷಣದ ಮುಖ್ಯಾಂಶಗಳು :
- ರೈತರ ಪಂಪ್ ಸೆಟ್‌ಗಳಿಗೆ ಮುಂದಿನ ಮೂರು ವರ್ಷಗಳ ವರೆಗೆ 300ರೂಪಾಯಿಗಿಂತ ಚಿಕ್ಕಾಸು ಹೆಚ್ಚಿಸಲು ಅವಕಾಶ ಕೊಡುವುದಿಲ್ಲ.
- ಪಂಪ್‌ಸೆಟ್‌ಗೆ ಮೀಟರ್ ಅಳವಡಿಸಿದಲ್ಲಿ ರೈತರ ಮಾರಣ ಹೋಮ ನಡೆಯಲಿದೆ. ಆದ್ದರಿಂದ ಸರಕಾರ ಇಂತಹ ಕ್ರಮ ಕೈಗೊಂಡಲ್ಲಿ ಮೀಟರ್ ಕಿತ್ತೆಸೆಯುವ ಅಭಿಯಾನ ಹಮ್ಮಿಕೊಳ್ಳಲಾಗುವುದು.
- ಕಳೆದ ಐದಾರು ತಿಂಗಳಲ್ಲಿ 167 ಮಂದಿ ರೈತರ ಆತ್ಮ ಹತ್ಯೆಯಾಗಿದೆ. ರಾಜ್ಯ ಸರಕಾರ ರೈತರಿಗೇನು ಸಹಾಯ ಮಾಡಿದೆ ಎಂದು ವರದಿ ನೀಡಲಿ.
- ರಾಜ್ಯದ ಅಬಕಾರಿ ದೊರೆಗಳಿಂದ 1450 ಕೋಟಿ ರೂಪಾಯಿ ವಿದ್ಯುತ್ ದರ ಬಾಕಿ ಇದೆ. ಇದರಲ್ಲಿ ಅರ್ಧದಷ್ಟು ಹಣ ವಸೂಲಿ ಮಾಡಿದರೂ ಕ್ಯಾಂಪ್ಕೋ ಸಂಸ್ಥೆಗೆ , ರೈತರಿಗೆ ಸಹಾಯ ಮಾಡಬಹುದು.
ಶಾಸಕ ಕಾಗೇರಿ ವಿಶ್ವೇಶ್ವರ ಹೆಗಡೆ, ಶಾಸಕ ಅರಗ ಜ್ಞಾನೇಂದ್ರ, ಕೇಂದ್ರ ಸಚಿವ ಧನಂಜಯ ಕುಮಾರ್, ಶಾಸಕ ಯೋಗೇಶ್ವರ ಭಟ್, ವಿಧಾನ ಪರಿಷತ್ ಸದಸ್ಯ ವಿ.ಎಸ್. ಆಚಾರ್ಯ ಮತ್ತಿತರ ಬಿಜೆಪಿ ನಾಯಕರು ಸಭೆಯಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications