ಮಲ್ಪೆ, ತಾಡದಿ, ಕರವಟ್ಟಿಯಲ್ಲಿ ಕರಾವಳಿ ಕಾವಲು ನೌಕಾ ನೆಲೆಗಳು
ಮಂಗಳೂರು : ಮಲ್ಪೆಯಲ್ಲಿ ಕರಾವಳಿ ಕಾವಲು ನೌಕಾ ನೆಲೆಯನ್ನು ಸ್ಥಾಪಿಸಲು ಕೇಂದ್ರ ರಕ್ಷಣಾ ಸಚಿವಾಲಯ ನಿರ್ಧರಿಸಿರುವುದಾಗಿ ಕರಾವಳಿ ಕಾವಲು ನೆಲೆಗಳ ಮಹಾ ನಿರ್ದೇಶಕ ಹಾಗೂ ಉಪ ನೌಕಾ ಸೇನಾಪತಿ ಒ. ಪಿ. ಬನ್ಸಾಲ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಕಾರ್ಗಿಲ್ ಕಾಳಗದ ನಂತರ ರಕ್ಷಣಾ ಸಚಿವಾಲಯವು ದೇಶದ ಕರಾವಳಿಯನ್ನು ಸೂಕ್ಷ್ಮ ಪ್ರದೇಶವೆಂದು ಗುರುತಿಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ತೀರ ಪ್ರದೇಶವನ್ನು ರಕ್ಷಿಸುವ ಹೊಣೆಯನ್ನು ಕರಾವಳಿ ಕಾವಲು ನೌಕಾ ನೆಲೆಗೆ ವಹಿಸಿಕೊಡಲಾಗಿದೆ ಎಂದು ಬನ್ಸಾಲ್ ಹೇಳಿದರು.
ದೇಶದಲ್ಲಿ ಒಟ್ಟು ಹತ್ತು ಕರಾವಳಿ ಕಾವಲು ನೆಲೆಯನ್ನು ಸ್ಥಾಪಿಸಲು ಸರಕಾರ ನಿರ್ಧರಿಸಿದ್ದು , ಕಾವಲು ನೆಲೆಯ ಘಟಕಗಳನ್ನು ಪಣಂಬೂರು, ತಾಡದಿ ಮತ್ತು ಕರವಟ್ಟಿಗಳಲ್ಲಿಯೂ ಸ್ಥಾಪಿಸಲಾಗುವುದು. ಮಂಗಳೂರು ಬಂದರಿನಲ್ಲಿ ಹಡಗುಗಳಿಗೆ ಜಾಗ ಸಾಲದೇ ಇದ್ದಲ್ಲಿ, ಕಾವಲು ನೌಕಾ ನೆಲೆಗೋಸ್ಕರ ಪ್ರತ್ಯೇಕ ಜಟ್ಟಿಗಳನ್ನು ನಿರ್ಮಿಸಲಾಗುವುದು ಎಂದು ಬನ್ಸಾಲ್ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications