ಬೆಳಗಾವಿ ಗಾದಿ ಕಾರ್ಖಾನೆಯಲ್ಲಿ ಅಕಸ್ಮಿಕ ಬೆಂಕಿಗೆ 4 ಮಂದಿ ಬಲಿ
ಬೆಳಗಾವಿ: ಇಲ್ಲಿನ ಪಾಂಗಳಿ ಗಲ್ಲಿಯ ಗಾದಿ ಕಾರ್ಖಾನೆಯಾಂದರಲ್ಲಿ ಅಕಸ್ಮಿಕವಾಗಿ ಹತ್ತಿಕೊಂಡ ಬೆಂಕಿ ಅಪಘಾತದಲ್ಲಿ ನಾಲ್ವರು ಮೃತರಾಗಿದ್ದಾರೆ.
ಒಬ್ಬ ಮಹಿಳೆ ಅಪಘಾತದಲ್ಲಿ ಸಜೀವ ದಹನವಾಗಿದ್ದು ಇನ್ನಿತರ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಕೊನೆಯುಸಿರೆಳೆದರು. ಮೃತಪಟ್ಟವರನ್ನು ಹುಲೀಮಾ ನಜೀರ್ ಅಹ್ಮದ್ ಹುಬಳೀಕರ್ (40), ಅಸಮಾ ಹಬೀಬಸಾಬ್ ನದಾಫ್(30), ಯಾಸೀರ್ ಹಬೀಬ ಸಾಬ್ ನದಾಫ್ (2) ಮತ್ತು ಮುಕ್ತಾರ ಅಹ್ಮದ್ ಹುಬಳೀಕರ್ ಎಂದು ಗುರುತಿಸಲಾಗಿದೆ.
ಶುಕ್ರವಾರ ಮಧ್ಯಾಹ್ನ ಕಾರ್ಖಾನೆಗೆ ಬೆಂಕಿ ಹತ್ತಿಕೊಂಡಿದ್ದು ಆರು ತಿಂಗಳ ಹಸುಳೆ ಸೇರಿದಂತೆ ಐವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳು ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications