ಕೆ.ಆರ್. ಪುರಂ ತೂಗು ಸೇತುವೆ ಇನ್ನೆರಡು ತಿಂಗಳಲ್ಲಿ ಪೂರ್ಣ
ಬೆಂಗಳೂರು : ಕೃಷ್ಣರಾಜಪುರಂ ಬಳಿ ನಿರ್ಮಿಸಲಾಗುತ್ತಿರುವ ತೂಗು ಸೇತುವೆ (ಗಾರ್ಡನ್ ಸಿಟಿ ಹೈವೇ ಬ್ರಿಡ್ಜ್) ಕಾಮಗಾರಿ ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ವಿಷಯವನ್ನು ದಕ್ಷಿಣ ರೈಲ್ವೆಯ ನಿರ್ಮಾಣ ವಿಭಾಗದ ಮುಖ್ಯ ಎಂಜಿನಿಯರ್ ಬಿ. ರಿಚರ್ಡ್‌ಸನ್ ತಿಳಿಸಿದ್ದಾರೆ.
ಸೋಮವಾರ ಎಫ್‌ಕೆಸಿಸಿಐ ಸಭಾಂಗಣದಲ್ಲಿ ವಾಣಿಜ್ಯೋದ್ಯಮಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಈ ಯೋಜನೆ ಪೂರ್ಣವಾಗುವ ಹೊತ್ತಿಗೆ 48 ಕೋಟಿ ರುಪಾಯಿ ವೆಚ್ಚ ಆಗಲಿದೆ ಎಂದರು.
ಸ್ವಿಸ್‌ನ ಎಂಎಸ್‌ಬಿಬಿಆರ್ ತಂತ್ರಜ್ಞಾನ ಸಹಕಾರದಿಂದ ಈ ಸೇತುವೆ ನಿರ್ಮಿಸಲಾಗುತ್ತಿದೆ. ಚೀನಾ ದೇಶದಲ್ಲಿ ಇಂತಹ ನೂರಕ್ಕೂ ಹೆಚ್ಚು ಸೇತುವೆಗಳಿವೆ. ಇಂತಹ ತಂತ್ರಜ್ಞಾನ ಬಳಸಿ ಸೇತುವೆ ನಿರ್ಮಿಸುವುದು ನಮಗೊಂದು ಸವಾಲಾಗಿದೆ. ಇದು ಈ ತಂತ್ರಜ್ಞಾನ ಬಳಸಿ ನಿರ್ಮಿಸಲಾದ ದೇಶದ ನಾಲ್ಕನೇ ಸೇತುವೆ ಆಗಲಿದೆ ಎಂದರು.
ವಾಸ್ತವವಾಗಿ ಸೇತುವೆ ನಿರ್ಮಾಣಕ್ಕೆ 30 ತಿಂಗಳ ಅವಧಿ ನೀಡಲಾಗಿತ್ತು. ನವೆಂಬರ್‌ನಲ್ಲೇ ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿತ್ತು. ಆದರೆ, ಭೂ ಸ್ವಾಧೀನ ಪ್ರಕ್ರಿಯೆ, ರಾಷ್ಟ್ರೀಯ ಹೆದ್ದಾರಿಯ ಪರ್ಯಾಯ ಮಾರ್ಗದಿಂದ ಸೇತುವೆ ಕಾಮಗಾರಿ ವಿಳಂಬವಾಯಿತು ಎಂದೂ ಅವರು ವಿವರಣೆ ನೀಡಿದರು.
(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications