ಸಮಾಜ ಸೇವಾ ಕಾರ್ಯಕರ್ತೆ ಸುಶೀಲಮ್ಮಗೆ ಮಾನವ ಹಕ್ಕು ಪ್ರಶಸ್ತಿ
ನವದೆಹಲಿ : ಕರ್ನಾಟಕದ ಸಮಾಜ ಸೇವಾ ಕಾರ್ಯಕರ್ತೆ ಎಸ್. ಜೆ. ಸುಶೀಲಮ್ಮ ಅವರಿಗೆ ಈ ವರ್ಷದ ಮಾನವ ಹಕ್ಕುಗಳ ಪ್ರಶಸ್ತಿಯನ್ನು ನೀಡಲಾಗಿದೆ.
ಸುಶೀಲಮ್ಮ ಸೇರಿದಂತೆ ನಿವೃತ್ತ ನ್ಯಾಯ ಮೂರ್ತಿ ಭಗವತಿ ಸೇರಿದಂತೆ ಒಂಬತ್ತು ಮಂದಿ 2000-2001ನೇ ಸಾಲಿನ ಮಾನವ ಹಕ್ಕು ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಸೋಮವಾರ ಅಂತರರಾಷ್ಟ್ರೀಯ ಮಾನವ ಹಕ್ಕು ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಸಮಾಜ ಸೇವಕಿ ಸುಶೀಲಮ್ಮ ಹಾಗೂ, ಸಾರ್ವಜನಿಕ ಹಿತಾಸಕ್ತಿ ದಾವೆಗಳಿಗೆ ಹೊಸ ಆಯಾಮ ನೀಡಿದ ನ್ಯಾಯಮೂರ್ತಿ ಭಗವತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಉಳಿದಂತೆ ಗುಜರಾತ್ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಎ. ಎಸ್. ಖುರೇಶಿ, ರಾಜ್ಯ ಸಭಾ ಸದಸ್ಯ ಎಲ್. ಎಂ. ಸಂಘ್ವಿ, ರಾಷ್ಟ್ರೀಯ ಮಾನವ ಹಕ್ಕು ಆಯೋಗದ ಸದಸ್ಯ ವೀರೇಂದ್ರ ದಯಾಲ್ ಕೂಡ ಮಾನವ ಹಕ್ಕು ಪ್ರಶಸ್ತಿ ಪಡೆದಿದ್ದಾರೆ.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications