ಮಾನವ ಸಂಪನ್ಮೂಲಕ್ಕಿಂತ ಹಣದ ಮೌಲ್ಯ ದೊಡ್ಡದಲ್ಲ -ಎನ್ಕೆ.ತಿಂಗಳಾಯ
ಸುಳ್ಯ : ಆಧುನಿಕ ಯುಗದಲ್ಲಿ ಜಗತ್ತಿನ ಎಲ್ಲ ವಿಷಯಗಳಿಗೂ ಹಣವನ್ನೇ ಮಾನದಂಡವನ್ನಾಗಿಸುವುದರಿಂದ ಮಾನವ ಸಂಪನ್ಮೂಲ ಅಭಿವೃದ್ಧಿಗೆ ತೊಡಕಾಗುತ್ತದೆ ಎಂದು ಕರ್ನಾಟಕ ಪ್ಲಾನಿಂಗ್ ಬೋರ್ಡ್‌ನ ಆಡಳಿತ ನಿರ್ದೇಶಕ ಡಾ. ಎನ್. ಕೆ. ತಿಂಗಳಾಯ ಅಭಿಪ್ರಾಯಪಟ್ಟಿದ್ದಾರೆ.
ಅವರು ಭಾನುವಾರ, ಕುರುಂಜಿ ಮೆಡಿಕಲ್ ಕಾಲೇಜಿನಲ್ಲಿ , ನೆಹರೂ ಸ್ಮಾರಕ ಮಹಾವಿದ್ಯಾಲಯ ಪ್ರಾಯೋಜಿಸಿದ್ದ ಮಂಗಳೂರು ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ಒಕ್ಕೂಟದ ಮಹಾಧಿವೇಶನದಲ್ಲಿ ಮಾತನಾಡುತ್ತಿದ್ದರು.
ಇದೇ ಸದಂರ್ಭದಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರೊ. ಜಿ.ವಿ. ಜೋಶಿ ಅವರು ನೆಹರೂ ಮೆಮೋರಿಯಲ್ ಕಾಲೇಜಿನ ಬೆಳ್ಳಿ ಹಬ್ಬದ ಪ್ರಯುಕ್ತ ಉಪನ್ಯಾಸ ನೀಡಿದರು. ಜಾಗತಿಕ ನಿರ್ವಹಣೆ, ಆಡಳಿತ ಮತ್ತು ಆರ್ಥಿಕ ವ್ಯವಸ್ಥೆಗಳ ನಡುವೆ ಸಾಕಷ್ಟು ಅಂತರವಿದೆ. ಜಾಗತೀಕರಣದ ಆರೋಗ್ಯಕರ ಬೆಳವಣಿಗೆಗಳೇನೆಂಬುದು ಜನಸಾಮಾನ್ಯರಿಗೆ ಇನ್ನೂ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸ್ಥಾಪಕಾಧ್ಯಕ್ಷ ಕುರುಂಜಿ ವೆಂಕಟರಮಣ ಗೌಡ, ಒಕ್ಕೂಟದ ಮಹಾಧಿವೇಶನವನ್ನು ಉದ್ಘಾಟಿಸಿ, ಅರ್ಥಶಾಸ್ತ್ರದ ನಿಜವಾದ ಅರ್ಥವನ್ನು ತಿಳಿದವ, ಸುಖವಾಗಿ ಬದುಕಬಲ್ಲ ಎಂದರು. ಕಾರ್ಯಕ್ರಮದಲ್ಲಿ 1998ರ ಬಳಿಕ ನೆಹರೂ ಮೆಮೋರಿಯಲ್ ಕಾಲೇಜಿನ ಆಶ್ರಯದಲ್ಲಿ ಎಂ.ಫಿಲ್, ಪಿಹೆಚ್. ಡಿ., ಪಡೆದ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications