ಆಯುರ್ವೇದ ವೈದ್ಯ ಕುಲಕರ್ಣಿ ಅವರಿಗೆ ‘ಭಾರತ್‌ ಗೌರವ’ ಪ್ರಶಸ್ತಿ

ಗದಗ್‌ : ರೋಣದ ಹೆಸರಾಂತ ಆಯುರ್ವೇದ ವೈದ್ಯ ಡಾ. ಎಂ.ಬಿ. ಕುಲಕರ್ಣಿ ಅವರು ನವದೆಹಲಿಯ ಭಾರತ ಅಂತಾರಾಷ್ಟ್ರೀ ಫ್ರೆಂಡ್‌ಷಿಪ್‌ ಸೊಸೈಟಿ ನೀಡುವ ‘ಭಾರತ್‌ ಗೌರವ್‌’ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಡಾ. ಕುಲಕರ್ಣಿ ಅವರು ಆಯುರ್ವೇದ ವೈದ್ಯ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಗೆ ಈ ಪ್ರಶಸ್ತಿ ಲಭ್ಯವಾಗಿದೆ.

ಡಾ. ಎಂ.ಬಿ. ಕುಲಕರ್ಣಿ ಅವರು, ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಪರಿಣತಿ ಪಡೆದಿದ್ದು, ದೇಶ - ವಿದೇಶಗಳಲ್ಲಿ ಆಯುರ್ವೇದದ ಬಗ್ಗೆ ನಡೆದ ವಿಚಾರಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದಾರೆ. ಇತ್ತಿಚೆಗೆ ಅವರು, ಶ್ರೀಲಂಕಾದಲ್ಲಿ ನಡೆದ ಆಯುರ್ವೇದ ವೈದ್ಯರ ಸಮ್ಮೇಳನದಲ್ಲೂ ಪಾಲ್ಗೊಂಡಿದ್ದರು.

ಭಾರತ್‌ಗೌರವ್‌ ಪ್ರಶಸ್ತಿಗೆ ಭಾಜನರಾಗಿರುವ ವೈದ್ಯ ಕುಲಕರ್ಣಿ ಅವರಿಗೆ ಸ್ಥಳೀಯ ಶಾಸಕ ಜಿ.ಎಸ್‌. ಪಾಟೀಲ್‌, ಗಲಗಂಜಿ ಮಠದ ಸ್ವಾಮೀಜಿ ಶ್ರೀಗುರುಪಾದ ದೇವರು ಅಭಿನಂದಿಸಿದ್ದಾರೆ.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+