Get Updates
Get notified of breaking news, exclusive insights, and must-see stories!

ಚಿತ್ತಾಪುರ ತಾಲ್ಲೂಕು ದಂಡಗುಂಡ ಗ್ರಾಮದ ಬಸ್ಸಿಗೆ ಭಾನುವಾರ ರಜೆ

ಚಿತ್ತಾಪುರ : ತಾಲ್ಲೂಕಿನ ದಂಡಗುಂಡ ಗ್ರಾಮಕ್ಕೆ ಓಡಿಸುವ ರೂಟ್‌ಬಸ್‌ಗೆ ಭಾನುವಾರ ರಜೆ ನೀಡುವ ಮೂಲಕ ಹೊಸ ಸಂಪ್ರದಾಯಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಾಂದಿ ಹಾಡಿದೆ.

ಭಾನುವಾರ ಬಂತೆಂದರೆ ದಂಡಗುಂಡ ಗ್ರಾಮಸ್ಥರಿಗೆ ಕಾಲೇ ಮೋಟಾರು. ಚಿತ್ತಾಪುರದಿಂದ 23 ಕಿಮೀ ದೂರದಲ್ಲಿರುವ ದಂಡಗುಂಡ ಗ್ರಾಮ ಈ ಭಾಗದ ಪ್ರಸಿದ್ಧ ಯಾತ್ರಾಸ್ಥಳವೂ ಹೌದು. ದಂಡಗುಂಡದ ಬಸವೇಶ್ವರ ಸ್ವಾಮಿಗೆ ತಾಲ್ಲೂಕಿನಲ್ಲಿ ಸಾವಿರಾರು ಭಕ್ತರಿದ್ದಾರೆ. ಗ್ರಾಮದ ಜನಸಂಖ್ಯೆ 2 ಸಾವಿರಕ್ಕೂ ಹೆಚ್ಚು .

ಸುತ್ತುಮುತ್ತಲಿನ ಅಳ್ಳಳ್ಳಿ ಹಾಗೂ ಸಾತನೂರು ಗ್ರಾಮಸ್ಥರಿಗೂ ಈ ಬಸ್ಸು ಸಂಪರ್ಕದ ಕೊಂಡಿಯಾಗಿದೆ. ವಾರಪೂರ್ತಿ ಸಂಚರಿಸುವ ಬಸ್ಸಿಗೆ ಭಾನುವಾರ ಮಾತ್ರ ರಜೆ. ಈ ರಜೆಗೆ ಸಂಸ್ಥೆ ನೀಡುವ ಕಾರಣ- ಆದಾಯದ ಕೊರತೆ. ಭಾನುವಾರ ಕೂಡ ಬಸ್‌ ಸಂಚಾರ ಆರಂಭಿಸಬೇಕು. ಇಲ್ಲದಿದ್ದರೆ ಡಿಪೊಗೆ ಮುತ್ತಿಗೆ ಹಾಕಲಾಗುವುದು ಎನ್ನುವುದು ಗ್ರಾಮಸ್ಥರ ಬೆದರಿಕೆ. ಅಂದಹಾಗೆ, ಈ ಸಂಪ್ರದಾಯ ಬೇರೆಡೆಗಳಲ್ಲೂ ಜಾರಿಯಲ್ಲಿದೆಯೋ ಅನ್ನುವುದು ತಿಳಿದುಬಂದಿಲ್ಲ .

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+