ಬೆಂಗಳೂರಿನ ನೂರು ವಾರ್ಡಲ್ಲಿ ಶುಚಿ ವಾರ್ಡ್‌ಗೆ ಚಿನ್ನದಪದಕ
ಬೆಂಗಳೂರು : ನಗರದ ಸೌಂದರ್ಯ ವರ್ಧಿಸುವಲ್ಲಿ ಹಲವಾರು ಕ್ರಮಗಳನ್ನು ಹಮ್ಮಿಕೊಂಡಿರುವ ನೂತನ ಮೇಯರ್ ಕೆ.ಚಂದ್ರಶೇಖರ್, ಈ ನಿಟ್ಟಿನಲ್ಲಿ ಶುಚಿತ್ವ ಕಾಪಾಡುವ ಒಂದು ವಾರ್ಡ್‌ಗೆ ಚಿನ್ನದ ಪದಕ ನೀಡುವುದಾಗಿ ಪ್ರಕಟಿಸಿದ್ದಾರೆ.
ಆರೋಗ್ಯಾಧಿಕಾರಿಗಳ ತಂಡದ ಉತ್ತಮ ಕಾರ್ಯನಿರ್ವಹಣೆ ಆಧಾರದ ಮೇರೆಗೆ ಆ ವಾರ್ಡಿನ ಆರೋಗ್ಯ ನಿರೀಕ್ಷಕ, ವೈದ್ಯಾಧಿಕಾರಿಗಳಿಗೂ ಸೂಕ್ತ ಬಹುಮಾನ ನೀಡಲಾಗುವುದು ಎಂದು ಚಂದ್ರಶೇಖರ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ನಗರದ ನೂರು ವಾರ್ಡ್‌ಗಳಲ್ಲಿ ಒಂದು ವಾರ್ಡ್‌ಗೆ ಮಾತ್ರ ಚಿನ್ನದ ಪದಕ ನೀಡಲಾಗುವುದು. ವಾರ್ಡಿನ ಸ್ವಚ್ಛತೆ ಕಾಪಾಡುವಲ್ಲಿ ಆರೋಗ್ಯಾಧಿಕಾರಿಗಳು ವಹಿಸಲಿರುವ ಕಾರ್ಯನಿರ್ವಹಣೆ ಮೇರೆಗೆ ತಂಡವನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಆಯುಕ್ತರು ಹಾಗೂ ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಬಹುಮಾನವನ್ನು ಯಾವಾಗಿನಿಂದ ಪ್ರಾರಂಭಿಸಬೇಕು ಎಂದು ನಿರ್ಧರಿಸಲಾಗುವುದು ಎಂದು ಚಂದ್ರಶೇಖರ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications