ಉಡುಪಿ ರಂಗಭೂಮಿ ನಾಟಕ ಸ್ಪರ್ಧೆಯಲ್ಲಿ ತಲೆದಂಡ ಪ್ರಥಮ
ಕುಂದಾಪುರ : ಉಡುಪಿ ರಂಗಭೂಮಿ ನಡೆಸಿದ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಕುಂದಾಪುರ ಬಂಡಾರ್ಕಾರ್ಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರ ಪ್ರಸ್ತುತ ಪಡಿಸಿದ ತಲೆದಂಡ ನಾಟಕ ಪ್ರಥಮ ಸ್ಥಾನ ಗಳಿಸಿದೆ.
ಕಳೆದ 22 ವರ್ಷಗಳಿಂದ ರಂಗಭೂಮಿಯಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ವಸಂತ ಬನ್ನಾಡಿಯವರು ಈ ನಾಟಕವನ್ನು ನಿರ್ದೇಶಿಸಿದ್ದು ಶ್ರೇಷ್ಠ ನಿರ್ದೇಶಕ ಎಂಬ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಬನ್ನಾಡಿ ಅವರ ನಿರ್ದೇಶನದ ‘ಕುರಿ’, ‘ಕತ್ತಲೆ ದಾರಿ ದೂರ’ ಹಾಗೂ ‘ಸಂಕ್ರಾಂತಿ’ ನಾಟಕಗಳು ಹಲವು ರಾಜ್ಯ ಮಟ್ಟದ ನಾಟಕ ಸ್ಪರ್ಧೆಗಳಲ್ಲಿ ಶ್ರೇಷ್ಠ ನಿರ್ದೇಶನ ಪ್ರಶಸ್ತಿ ತಂದುಕೊಟ್ಟಿದ್ದವು.
ಬಂಡಾರ್ಕಾರ್ಸ್ ಕಾಲೇಜಿನಲ್ಲಿ ರಂಗ ಅಧ್ಯಯನ ಕೇಂದ್ರವನ್ನು ಸ್ಥಾಪಿಸಿ ರಂಗ ಕಲಾವಿದರನ್ನು ರೂಪಿಸಲು ಹೆಣಗುತ್ತಿರುವ ಬನ್ನಾಡಿ ರಂಗ ಅಧ್ಯಯನ ಕೇಂದ್ರದ ಸಂಚಾಲಕರು. ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಆರಂಭಿಸಿದ ಈ ಕೇಂದ್ರ, ರಂಗಭೂಮಿ ಆಸಕ್ತರ ಯಶಸ್ವಿ ವಿದ್ಯಾಸಂಸ್ಥೆಯಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications