ಒಸಾಮನಿಗೆ ಬೆಂಗಳೂರಲ್ಲಿ ಬೇಡಿಕೆ, ಪಾಕ್‌ನಲ್ಲಿ ವ್ಯಾಪಾರ ಠುಸ್ಸು
ಕರಾಚಿ : ಬೆಂಗಳೂರು, ಬೆಳಗಾವಿಯಲ್ಲಿ ಒಸಾಮನ ಚಿತ್ರವಿರುವ ಟಿ- ಶರ್ಟುಗಳ ಬಿಕರಿ ಜೋರಾಗಿ ಆಗುತ್ತಿದ್ದರೆ, ಪಾಕಿಸ್ತಾನದಲ್ಲಿ ಒಸಾಮನ ನಂಬಿಕೊಂಡ ದುಕಾನುದಾರರ ವ್ಯಾಪಾರ ಭಣ ಭಣ. ಸೆಪ್ಟೆಂಬರ್ 11ರಂದು ಅಮೆರಿಕಾ ಮೇಲೆ ಉಗ್ರರ ದಾಳಿಯ ನಂತರ ಒಸಾಮ ಪಾಕಿಸ್ತಾನೀಯರ ಪಾಲಿಗೆ ಖಳನಾಯಕನಾಗಿಬಿಟ್ಟಿದ್ದಾನೆ.
ಕರಾಚಿಯಲ್ಲಿ ಪೋಸ್ಟರು- ಮುಖವಾಡಗಳ ಮಾರುವ ಒಂದು ಅಂಗಡಿ. ಮಾಲೀಕನ ಹೆಸರು ಜಾಮಿಲ್ ಅಹ್ಮದ್. ಆತ ಹೇಳುವಂತೆ ಅಮೆರಿಕಾದ ಅವಳಿ ಕಟ್ಟಡ ಕುಸಿಯುವ ಮುಂಚೆ ಒಸಾಮನ ನೂರಾರು ಪೋಸ್ಟರುಗಳು- ಮುಖವಾಡಗಳು ಬಿಕರಿಯಾಗುತ್ತಿದ್ದವು. ಆದರೀಗ ಅಬ್ಬಬ್ಬಾ ಅಂದರೆ ಹದಿನೈದು ಇಪ್ಪತ್ತು ಪೋಸ್ಟರ್‌ಗಳು ಮಾರಾಟವಾಗುತ್ತವೆ. ಒಸಾಮ ಬಿನ್ ಲ್ಯಾಡೆನ್ ಅನೇಕರ ಪಾಲಿಗೆ ಹೀರೋ ಆಗಿದ್ದ ಕಾಲ ಇದೀಗ ಇತಿಹಾಸ.
ಸಯೀದ್ ಅಹ್ಮದ್ ಎಂಬ ಜವಳಿ ವ್ಯಾಪಾರಿ ಈದ್ ಹಬ್ಬದ ಪ್ರಯುಕ್ತ ಲ್ಯಾಡೆನ್ ಚಿತ್ರವಿರುವ 2000 ಟಿ- ಶರ್ಟ್‌ಗಳಿಗೆ ಆರ್ಡರ್ ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ಒಸಾಮ ಖಳನಾಯಕನಾದ. ಆರ್ಡರನ್ನು 300ಕ್ಕೆ ಇಳಿಸಿಬಿಟ್ಟರು. ಅನೇಕ ಪಾಕಿಸ್ತಾನೀಯರ ಪಾಲಿಗೆ ಈಗ ಒಸಾಮ ಭಯೋತ್ಪಾದಕ !
ಹೀಗಿದ್ದೂ ಪಶ್ತೂನರ ಸಂಖ್ಯೆ ಅಧಿಕವಾಗಿರುವ ಜಾಗೆಗಳಲ್ಲಿ ಒಸಾಮನಿಗೆ ನಿತ್ಯ ಪೂಜೆ ನಡೆಯುತ್ತಿದೆ. ಇವರ ಪ್ರಕಾರ ಆತ ಇಸ್ಲಾಂ ದೇವ ! ಆಫ್ಘಾನಿಸ್ತಾನವನ್ನು ಸಾಕಷ್ಟು ಹಾಳುಗೆಡಹಿರುವ ಅಮೆರಿಕಾವನ್ನು ಒಸಾಮ ಸುಮ್ಮನೆ ಬಿಡುವುದಿಲ್ಲ. ಆತ ಸೇಡು ತೀರಿಸಿಕೊಳ್ಳುವ ದಿನವನ್ನೇ ನಾವು ಇದಿರುನೋಡುತ್ತಿದ್ದೇವೆ ಎನ್ನುತ್ತಾರೆ ಶೇರ್ ಗುಲ್ ಖಾನ್ ಎಂಬ ಲಾರಿ ಚಾಲಕ.
ಬೆಂಗಳೂರು ವರದಿ : ಬೆಂಗಳೂರಲ್ಲೂ ಒಸಾಮನ ಚಿತ್ರವಿರುವ ಟಿ- ಶರ್ಟ್‌ಗಳು ಫುಟ್‌ಪಾತಿನ ದುಕಾನುಗಳಿಂದ ಹಿಡಿದು ದೊಡ್ಡ ದೊಡ್ಡ ಶೋ ರೂಂಗಳಲ್ಲೂ ಇಣುಕುತ್ತಿವೆ. ಆದರೆ ಅದರಲ್ಲಿನ ಸಂದೇಶ ಪೊಲೀಸರು ಅವನ್ನು ವಶಪಡಿಸಿಕೊಳ್ಳುವುದರಿಂದ ಬಚಾವು ಮಾಡಿದೆ. ಒಸಾಮನ ಚಿತ್ರದ ಮೇಲೆ ಅಥವಾ ಕೆಳಗೆ ‘ಸ್ಟಾಪ್ ದಿ ವಾರ್’ ಎಂಬ ಬರೆಹ ಇದೆ. ಒಸಾಮನ ಚಿತ್ರವಿರುವ, ಇಂಥಾ ಸಂದೇಶವಿರದ ಟಿ- ಶರ್ಟ್ ಮಾರುತ್ತಿದ್ದ ಒಬ್ಬಾತನನ್ನು ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications