ಕೆಜಿಎಫ್‌ನಲ್ಲಿ ಕಲಬೆರಕೆ ನೀರಾ ಸೇವಿಸಿ ಓರ್ವನ ಸಾವು
ಕೋಲಾರ: ನುಸಿರೋಗಕ್ಕೆ ಔಷಧಿ ಸಿಂಪರಣೆ ಕಾರ್ಯಕ್ರಮ ಮಂದಗತಿಯಲ್ಲಿ ಸಾಗುತ್ತಿರುವಂತೆ ಇನ್ನೊಂದೆಡೆ ನೀರಾ ಆಂದೋಲನ ಚುರುಕು ಕಳಕೊಳ್ಳುತ್ತಿದೆ. ಕೆಲವು ಕಡೆಗಳಲ್ಲಿ ನೀರಾದಿಂದ ತಮ್ಮ ಮಾರಾಟಕ್ಕೆ ಪೆಟ್ಟು ಬಿದ್ದಿದೆ ಎಂದು ಸಾರಾಯಿ ವ್ಯಾಪಾರಿಗಳು ಪ್ರತಿಭಟನೆಯ ದನಿ ಎತ್ತಿರುವುದೂ ಉಂಟು. ಆದರೆ, ಇಲ್ಲಿನದು ಕಲಬೆರಕೆ ನೀರಾ ಹಾಗೂ ಅದರಿಂದ ಉಂಟಾದ ಜೀವಹಾನಿಯ ಸುದ್ದಿ .
ಕಲಬೆರಕೆ ನೀರಾ ಕುಡಿದ ಪರಿಣಾಮ ಕೋಲಾರ ಗೋಲ್ಡ್ ಫೀಲ್ಡ್ ನಗರದ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು , ಇತರ 15 ಮಂದಿ ಅಸ್ವಸ್ಥರಾಗಿದ್ದಾರೆ. ಕಲುಷಿತ ನೀರಾ ಸೇವಿಸಿ ಅಸ್ವಸ್ಥರಾದ 40 ವರ್ಷ ವಯಸ್ಸಿನ ಡಿ. ಕುಮಾರ್ ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕುಮಾರ್ ಮೃತಪಟ್ಟಿರುವುದಾಗಿ ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ.
ಗೋಲ್ಡ್ ಫೀಲ್ಡ್ ನಗರ ಪ್ರದೇಶದಲ್ಲಿ ಮಾರುತ್ತಿದ್ದ ಕಲಬೆರಕೆ ನೀರಾ ಕುಡಿದು ಅನಾರೋಗ್ಯ ಪೀಡಿತರಾದ ಇತರ 15 ಮಂದಿಯನ್ನು ಹತ್ತಿರದ ಸರಕಾರೀ ಆಸ್ಪತ್ರೆಗೆ ಸೇರಿಸಲಾಗಿದೆ. ಅಂದಹಾಗೆ, ಕಲಬೆರಕೆ ನೀರಾ ಸೇವನೆಯಿಂದ ರಾಜ್ಯದಲ್ಲಿ ವರದಿಯಾದ ಮೊದಲ ದುರಂತವಿದು.
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...